National

ಗರ್ಭಿಣಿ-ಹಸುಳೆ ಜೀವ ಉಳಿಸಿದ ಭಾರತೀಯ ಯೋಧರು

ಶ್ರೀನಗರ: ನಮ್ಮ ಭಾರತೀಯ ಯೋಧರಿಗೆ ಕೊಡುವ ಗೌರವ ಸುಮ್ಮನೇ ಅಲ್ಲ. ಅವರ ಪ್ರಾಣವನ್ನೇ ಪಣಕ್ಕಿಟ್ಟು ದೇಶಸೇವೆಗೆ ಮುಂದಾಗಿರುವ ನಮ್ಮ ಯೋಧರ ಬಗ್ಗೆ ಎಷ್ಟು ಹೇಳಿದ್ರೂ ಸಾಕಾಗಲ್ಲ. ಕೇವಲ ದೇಶ ಅಲ್ಲ ಅಲ್ಲಿನ ಜನರ ಬಗ್ಗೆ ಕೂಡ ಅಪಾರವಾದ ಪ್ರೀತಿ. ಗೌರವ ನಮ್ಮ ಯೋಧರಿಗಿದೆ. ತಾಯಿ ತಾಯ್ನಾಡು ವಿಚಾರಕ್ಕೆ ಬಂದ್ರೆ ಎಂಥವರು ಕೂಡ ಮುನ್ನುಗ್ಗುತ್ತಾರೆ ಅಂಥದ್ರಲ್ಲಿ ನಮ್ಮ ವೀರ ಯೋಧರು ಸುಮ್ನರ್ತಾರಾ.. ಗನ್‌ ಹಿಡಿದು ದೇಶ ಕಾಯುವುದರ ಜೊತೆಗೆ ಜನಸೇವೆ ಕೂಡ ಮಾಡ್ತಾರೆ ನಮ್ಮ ಸೈನಿಕರು. ಹೌದು ಭಾರೀ ಹಿಮಪಾತದ ನಡುವೆ ಎರಡು ಜೀವಗಳನ್ನನು ಉಳಿಸಲು ಆರೂವರೆ ಕಿ.ಲೋಮೀಟರ್‌ ನಡೆದು ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ತುಂಬು ಗರ್ಭಿಣಿ ಮಹಿಳೆಗೆ ತುರ್ತು ವೈದ್ಯಕೀಯ ನೆರವಿಗಾಗಿ ಎಲ್‌ಒಸಿ ಬಳಿಯಿರುವ ಬೋನಿಯಾರ್‌ನಲ್ಲಿ ಘಗರ್‌ ಹಿಲ್ ಗ್ರಾಮದಿಂದ ಚೀನಾರ್‌ ವಾರಿಯರ್ಸ್‌ಗೆ ರಕ್ಷಣೆ ಕೋರಿ ಕರೆ ಬಂದಿದೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಯೋಧರು ಸ್ಟ್ರೆಚರ್ನಲ್ಲಿ ಗರ್ಭಿಣಿ ಮಹಿಳೆಯನ್ನು 6.5ಕಿಲೋ ಮೀಟರ್‌ ಹಿಮಪಾತದಲ್ಲಿ ನಡೆದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ ಸೇನೆಗೆ ಧನ್ಯವಾದ ತಿಳಿಸಿದ್ದಾರೆ. ಇಂದು ನಾನು ನನ್ನ ಮಗು ಜೀವಂತವಾಗಿ ಆರೋಗ್ಯವಾಗಿ ಇರುವುದಕ್ಕೆ ಕಾರಣರಾದ ಯೋಧರಿಗೆ ನನ್ನ ಹೃತ್ಪೂರ್ವಕ ನಮನಗಳನ್ನು ತಿಳಿಸಿದ್ದಾರೆ. ಸೈನಿಕರು ಗರ್ಭಿಣಿ ಮಹಿಳೆಯನ್ನು ಸಾಗಿಸುವ ಫೋಟೋವನ್ನು ಚೀನಾರ್‌ ವಾರಿಯರ್ಸ್‌ ತನ್ನ ಅಧಿಕೃತ ಟ್ವಿಟ್ಟರ್‌ನಲ್ಲಿ ಖಾತೆಯಲ್ಲಿ ಪೋಸ್ಟ್‌ ಮಾಡಿದೆ. ಹಸುಳೆ ಪ್ರಪಂಚವನ್ನು ನೋಡಲು ನಿಮ್ಮ ಕಾರ್ತಕ್ಷಮತೆಯೇ ಸಾಧ್ಯ ಎಂದು ಸೈನಿಕರ ಕಾರ್ಯ ಸಾಧನೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ.

Share Post