CrimeDistricts

ಮುರುಘಾ ಮಠದ ಎಲ್ಲಾ ವಿದ್ಯಾರ್ಥಿನಿಯರ ಆಪ್ತ ಸಮಾಲೋಚನೆಗೆ ನಿರ್ಧಾರ

ಚಿತ್ರದುರ್ಗ; ಮುರುಘಾ ಶ್ರೀಗಳ ವಿರುದ್ಧದ ಪ್ರಕರಣಗಳ ತನಿಖೆ ಮತ್ತಷ್ಟು ಚುರುಕುಗೊಳ್ಳುತ್ತಿದೆ. ಮಠದ ಹಾಸ್ಟೆಲ್‌ನಲ್ಲಿದ್ದ ಎಲ್ಲಾ ಬಾಲಕಿಯರನ್ನು ಈಗ ಆಪ್ತ ಸಮಾಲೋಚನೆ ಮಾಡಲು ನಿರ್ಧರಿಸಲಾಗಿದೆ. ಮಕ್ಕಳ ರಕ್ಷಣಾ ನಿರ್ದೇಶನಾಲಯ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.

ಮಠದ ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿನಿಯರೇ ಶ್ರೀಗಳ ವಿರುದ್ಧ ದೂರು ನೀಡಿರೋದು. ಇನ್ನಷ್ಟು ವಿದ್ಯಾರ್ಥಿನಿಯರಿಗೆ ಇದೇ ರೀತಿಯ ಕಿರುಕುಳ ಆಗಿದೆ ಎಂಬ ಆರೋಪವಿದೆ. ಆದ್ರೆ ಕೆಲವರು ಭಯಕ್ಕೆ ಹಾಗೂ ಮಾರ್ಯಾದೆ ಅಂಜಿ ಹೇಳುತ್ತಿಲ್ಲ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ ಆಪ್ತ ಸಮಾಲೋಚನೆ ನಡೆಸಲು ತೀರ್ಮಾನ ಮಾಡಿದೆ. ಮೂರು ಹಂತಗಳಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು, ನವೆಂಬರ್‌ 30ರೊಳಗೆ ಎಲ್ಲಾ ವಿದ್ಯಾರ್ಥಿನಿಯರಿಗೂ ಆಪ್ತಸಮಾಲೋಚನೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

ಪ್ರಕರಣ ಬೆಳಕಿಗೆ ಬಂದ ನಂತ್ರ ಮಠದಲ್ಲಿದ್ದ 49 ವಿದ್ಯಾರ್ಥಿನಿಯರನ್ನು ಮಕ್ಕಳ ರಕ್ಷಣಾ ಘಟಕಗಳ ನೆರವಿನೊಂದಿಗೆ ಆಯಾ ಜಿಲ್ಲೆಗಳಿಗೆ ಕಳುಹಿಸಲಾಗಿದೆ. ಉಳಿದ 54 ವಿದ್ಯಾರ್ಥಿನಿಯರನ್ನು ಅವರ ಪಾಲಕರೊಂದಿಗೆ ಕಳುಹಿಸಲಾಗಿದ್ದು, ಈಗ ಎಲ್ಲರನ್ನೂ ಆಪ್ತ ಸಮಾಲೋಚನೆ ನಡೆಸಲು ನಿರ್ಧಾರ ಮಾಡಲಾಗಿದೆ.

 

Share Post