ಸರಸಕ್ಕೆ ಬಂದ ಬಾಯ್‌ಫ್ರೆಂಡ್ ಮರ್ಮಾಂಗಕ್ಕೆ ಕತ್ತರಿ; ಕಮೋಡ್ ಒಳಗೆ ಹಾಕಿ ಫ್ಲಶ್ ಮಾಡಿದ ನಾರಿ..!
ಪಾಟ್ನಾ; ಬಾಯ್‌ಫ್ರೆಂಡ್‌ಗೆ ಸರಸಕ್ಕೆ ಆಹ್ವಾನ ನೀಡಿ, ಮನೆಗೆ ಬಂದ ಆತನ ಮರ್ಮಾಂಗ ಕತ್ತಸಿರುವ ಮಹಿಳೆ ಅದನ್ನು ಕಮೋಡ್‌ಗೆ ಹಾಕಿ ಫ್ಲಶ್ ಮಾಡಿಬಿಟ್ಟಿದ್ದಾಳೆ.. ಹಲವಾರು ದಿನಗಳ ಕಾಲ ದೈಹಿಕ ಸುಖ ಅನುಭವಿಸಿ, ಮದುವೆಗೆ ಒಲ್ಲೆ ಎಂದು ಕೈ ಎತ್ತಿದ್ದ ಬಾಯ್‌ಫ್ರೆಂಡ್‌ಗೆ ಮಹಿಳೆ ಈ ರೀತಿಯ ಶಿಕ್ಷೆ ನೀಡಿದ್ದಾಳೆ.. ಬಿಹಾರದ ಸರನ್ ಜಿಲ್ಲೆಯ ಮಧೌರದಲ್ಲಿ ಈ ಘಟನೆ ನಡೆದಿದೆ..
ಮಹಿಳೆ ನರ್ಸಿಂಗ್ ಹೋಮ್ ನಡೆಸುತ್ತಾಳೆ.. ಈ ಮಹಿಳೆಗೂ ಮಧೌರದ 12ನೇ ವಾರ್ಡ್ ಕೌನ್ಸಿಲರ್ ವೇದಪ್ರಕಾಶ್ ನಡುವೆ ಪ್ರೇಮಾಂಕುರವಾಗಿತ್ತು.. ಇವರ ಪ್ರೀತಿ ಗಾಢವಾಗಿದ್ದು, ಮದುವೆಗೆ ಮುಂಚೆಯೇ ಇಬ್ಬರೂ ಹಾಸಿಗೆ ಹಂಚಿಕೊಂಡಿದ್ದರು.. ಹಲವಾರು ಬಾರಿ ಇಬ್ಬರೂ ದೈಹಿಕ ಸಂಪರ್ಕ ಬೆಳೆಸಿದ್ದರು.. ಇತ್ತ ಮಹಿಳೆ ಮದುವೆಯಾಗುವಂತೆ ಒತ್ತಾಯಿಸುತ್ತಾ ಬಂದಿದ್ದಳು.. ಮುಂದೂಡಿಕೊಂಡೇ ಬಂದಿದ್ದ ವೇದಪ್ರಕಾಶ್, ಒತ್ತಡಕ್ಕೆ ಮಣಿದು ಕೊನೆಗೂ ಮದುವೆಗೆ ಒಪ್ಪಿದ್ದ.. ಮದುವೆ ದಿನಾಂಕ ಕೂಡಾ ಫಿಕ್ಸ್ ಆಗಿತ್ತು.. ಆದ್ರೆ ಮದುವೆ ದಿನ ಹತ್ತಿರವಾಗುತ್ತಿದ್ದಂತೆ ಮತ್ತೆ ಕ್ಯಾತೆ ತೆಗೆದಿದ್ದಾನೆ.. ನಾನು ನಿನ್ನ ಮದುವೆಯಾಗಲ್ಲ ಎಂದುಬಿಟ್ಟಿದ್ದಾನೆ.. ಇದರಿಂದ ಕಂಗಾಲಾಗಿದ್ದ ಮಹಿಳೆ ಈತನಿಗೆ ಬುದ್ಧಿ ಕಲಿಸಬೇಕು ಎಂದು ಪ್ಲ್ಯಾನ್ ಮಾಡಿದ್ದಾಳೆ.. ಸ್ವಲ್ಪ ದಿನ ಆತನ ಜೊತೆ ಸಲುಗೆಯಿಂದಲೇ ಚಾಟ್ ಮಾಡಿದ ಆಕೆ, ಸರಸಕ್ಕೆ ಬರುವಂತೆ ಮನೆಗೆ ಕರೆದಿದ್ದಾಳೆ..
ಖುಷಿಯಿಂದ ಪ್ರಿಯತಮೆಯ ಮನೆಗೆ ಹೋದ ವೇದಪ್ರಕಾಶ್ ಬೆಡ್ ಮೇಲೆ ಬೆತ್ತಲಾಗಿದ್ದಾನೆ.. ಇದೇ ಸಮಯ ಕಾಯುತ್ತಿದ್ದ ಮಹಿಳೆ ಆತನ ಮರ್ಮಾಂಗ ಕತ್ತರಿಸಿ ಟಾಯ್ಲೆಟ್ ಕಮೋಡ್‌ಗೆ ಹಾಕಿ ಫ್ಲಶ್ ಮಾಡಿಬಿಟ್ಟಿದ್ದಾಳೆ.. ಇತ್ತ ವೇದಪ್ರಕಾಶ್ ನೋವು ತಡೆಯಲಾಗದೆ ಚೀರಾಡಿದ್ದಾನೆ.. ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾನೆ.. ಪೊಲೀಸರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.. ಮಾಡಿದ ತಪ್ಪಿಗೆ ಮಹಿಳೆ ಜೈಲು ಸೇರುವಂತಾಗಿದೆ..