NationalPolitics

ಇಂಡಿಯನ್‌ ಮುಜಾಹಿದ್ದೀನ್‌, ಪಿಎಫ್‌ಐನಲ್ಲೂ INDIA ಇದೆ; ಪ್ರಧಾನಿ ಮೋದಿ ವ್ಯಂಗ್ಯ

ನವದೆಹಲಿ; ಎನ್‌ಡಿಎ ವಿರುದ್ಧ ಒಗ್ಗೂಡಿರುವ ವಿರೋಧ ಪಕ್ಷಗಳು ತಮ್ಮ ಒಕ್ಕೂಟಕ್ಕೆ INDIA ಎಂದು ಹೆಸರಿಟ್ಟಿದ್ದಾರೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯ ಮಾಡಿದ್ದಾರೆ. ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಈಸ್ಟ್‌ ಇಂಡಿಯಾ ಕಂಪನಿ, ಇಂಡಿಯನ್‌ ಮುಜಾಹಿದ್ದಿನ್‌, ಪಿಎಫ್‌ಐಗಳಲ್ಲೂ INDIA ಎಂಬ ಹೆಸರಿದೆ. ಇಂಡಿಯಾ ಎಂಬ ಹೆಸರು ಇದ್ದರೆ ಅದು ಭಾರತವಾಗುವುದಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಮಣಿಪುರದ ವಿಚಾರವಾಗಿ ಲೋಕಸಭೇಯಲ್ಲಿ ಪ್ರಧಾನಿ ಮೋದಿ ಮಾತನಾಡಬೇಕೆಂದು ವಿಪಕ್ಷಗಳು ಪಟ್ಟು ಹಿಡಿದಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಸಲಾಯಿತು. ಇದರಲ್ಲಿ ಮಾತನಾಡಿರುವ ಮೋದಿ, ಕೇವಲ ದೇಶದ ಹೆಸರನ್ನು ತೋರಿಸಿಕೊಂಡು ಜನತೆ ದಿಕ್ಕು ತಪ್ಪಿಸೋದಕ್ಕೆ ಆಗೋದಿಲ್ಲ. ಯಾಕಂದ್ರೆ ಉಗ್ರ ಸಂಘಟನೆಗಳು ಕೂಡಾ ಇಂಡಿಯಾ ಹೆಸರಿಟ್ಟುಕೊಂಡಿವೆ ಎಂದಿದ್ದಾರೆ. ಮುಂದಿನ ಚುನಾವಣೆಯಲ್ಲೂ ನಾವೇ ಗೆಲ್ಲಲ್ಲಿದ್ದು,  ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕ ದೇಶವಾಗಿ ಬೆಳೆಯಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

Share Post