CrimeInternational

ದಕ್ಷಿಣ ಕೊರಿಯಾ ವಿರೋಧ ಪಕ್ಷದ ನಾಯಕನಿಗೆ ಚಾಕು ಇರಿತ!

ಸಿಯೋಲ್; ದಕ್ಷಿಣ ಕೊರಿಯಾದ ವಿರೋಧ ಪಕ್ಷದ ನಾಯಕನಿಗೆ ಬಹಿರಂಗ ಪ್ರದೇಶದಲ್ಲೇ ಚಾಕುವಿನಿಂದ ಇರಿಯಲಾಗಿದೆ. ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿರುವಾಗಲೇ ವ್ಯಕ್ತಿಯೊಬ್ಬ ದಕ್ಷಿಣ ಕೊರಿಯಾದ ವಿರೋಧ ನಾಯಕ ಲೀ ಜೇ-ಮ್ಯುಂಗ್‌ (59)  ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ತಕ್ಷಣ ಅವರನ್ನು ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸೇರಿಸಲಾಗಿದೆ.

ನೂತನವಾಗಿ ನಿರ್ಮಾಣವಾಗಿರುವ ವಿಮಾನ ನಿಮ್ದಾಣ ಸ್ಥಳಕ್ಕೆ ವಿರೋಧ ಪಕ್ಷದ ನಾಯಕರು ಆಗಮಿಸಿದ್ದರು. ಈ ವೇಳೆ ಅವರನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಬಂದ ವ್ಯಕ್ತಿ ಏಕಾಏಕಿ ಕುತ್ತಿಗೆಗೆ ಇರಿದಿದ್ದಾರೆ. ದಾಳಿ ನಡೆಸಿರುವ ದೃಶ್ಯದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಜನರು ವಿಪಕ್ಷ ನಾಯಕರ ಸಹಾಯಕ್ಕೆ ಧಾವಿಸುತ್ತಿದ್ದಂತೆ ನೆಲಕ್ಕೆ ಕುಸಿದು ಬೀಳುತ್ತಿರುವುದು ವೀಡಿಯೋದಲ್ಲಿ ಕಂಡುಬಂದಿದೆ.

Share Post