CrimeNational

ನಾಲೆಯೊಳಗೆ ಬಿತ್ತು ದುಬಾರಿ ಮೊಬೈಲ್‌; 21 ಲೀಟರ್‌ ನೀರು ಖಾಲಿ ಮಾಡಿಸಿದ ಅಧಿಕಾರಿ

ರಾಯ್ಪುರ; ನಾಲೆಯೊಳಗೆ ಅಧಿಕಾರಿಯೊಬ್ಬರ ದುಬಾರಿ ಮೊಬೈಲ್‌ ಬಿದ್ದಿದೆ ಎಂಬ ಕಾರಣಕ್ಕೆ ಸುಮಾರು 1500 ಎಕರೆಗೆ ಹರಿಸಬಹುದಾಗಿದ್ದ 21 ಲಕ್ಷ ಲೀಟರ್‌ ನೀರನ್ನು ಹೊರಹಾಕಲಾಗಿದೆ. ಈ ಕಾರಣಕ್ಕಾಗಿ ಆ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಛತ್ತೀಸ್‍ಗಢದ ಕಂಕೇರ್ ಜಿಲ್ಲೆಯ ಕೊಯಿಲಿಬೀಡಾ ಬ್ಲಾಕ್‍ನ ಖೇರ್ಕಟ್ಟಾ ಅಣೆಕಟ್ಟಿನಲ್ಲಿ ಈ ಘಟನೆ ನಡೆದಿದೆ.

ಆಹಾರ ಇಲಾಖೆಯ ಆಧಿಕಾರಿ ರಾಜೇಶ್ ವಿಶ್ವಾಸ್ ವಾಯುವಿಹಾರಕ್ಕೆ ಅಣೆಕಟ್ಟೆ ಬಳಿ ಹೋಗಿದ್ದರು. ಈ ವೇಳೆ ಅಧಿಕಾರಿಯ ಕೈನಲ್ಲಿದ್ದ ಒಂದು ಲಕ್ಷ ರೂಪಾಯಿ ಬೆಲೆಯ ಮೊಬೈಲ್‌ ನೀರಿಗೆ ಬಿದ್ದಿದೆ. ಈ ಕಾರಣಕ್ಕಾಗಿ ಆ ಅಧಿಕಾರಿ ಡ್ಯಾಮ್‌ನಲ್ಲಿದ್ದ ನೀರನ್ನೇ ಖಾಲಿ ಮಾಡಲು ಆದೇಶ ಮಾಡಿದ್ದಾನೆ. ನೀರು ಹೊರತೆಗೆಯಲು ಸುಮಾರು 7 ಸಾವಿರದಿಂದ 8 ಸಾವಿರ ರೂಪಾಯಿ ಮೌಲ್ಯದ ಡೀಸೆಲ್ ಬಳಸಲಾಗಿದೆ. ವಿಷಯ ಹಿರಿಯ ಅಧಿಕಾರಿಗಳಿಗೆ ಗೊತ್ತಾಗಿದ್ದು, ಆರೋಪಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

Share Post