ತಂದೆ ಮಾಡಿದ ಸಾಲದ ಕಾರಣಕ್ಕೆ 7 ತರಗತಿ ಬಾಲಕಿ ಮೇಲೆ ಅತ್ಯಾಚಾರ!
ಹೈದರಾಬಾದ್; ತಂದೆ-ತಾಯಿ ವ್ಯಕ್ತಿಯೊಬ್ಬನಿಂದ 2 ಲಕ್ಷ ರೂಪಾಯಿ ಸಾಲ ಪಡೆದಿದ್ದರು.. ಅದರ ಅರಿವೂ ಕೂಡಾ ಈ ಪುಟ್ಟ ಬಾಲಕಿಗೆ ಇರಲಿಲ್ಲ.. ಯಾಕಂದ್ರೆ ಆಕೆ ಇನ್ನೂ ಏಳನೇ ತರಗತಿ ವಿದ್ಯಾರ್ಥಿನಿ.. ಆ ಸಾಲ ಕೊಟ್ಟ ಪಾಪಿ ಕೊಟ್ಟ ಸಾಲ ವಾಪಸ್ ಬರದ ಕಾರಣಕ್ಕಾಗಿ ಬಾಲಕಿ ಮೇಲೆ ಸೇಡು ತೀರಿಸಿಕೊಂಡಿದ್ದಾರೆ.. ಪುಟಾಣಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ.. ಆಂಧ್ರ ಪ್ರದೇಶದ ಏಲೂರು ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಈ ದುಷ್ಕೃತ್ಯ ನಡೆದಿದೆ.
ಈ ಘಟನೆ ಸಂಬಂಧ 15 ವರ್ಷದ ಅಪ್ರಾಪ್ತ ಬಾಲಕ ಹಾಗೂ 19 ರಿಂದ 22 ವರ್ಷದೊಳಗಿನ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.. ಕೋರ್ಟ್ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ಕೂಡಾ ವಿಧಿಸಿದೆ..
ಬಾಲಕಿಯ ಪೋಷಕರು ಆರೋಪಿಯೊಬ್ಬನಿಂದ 2 ಲಕ್ಷ ರೂಪಾಯಿ ಸಾಲ ಪಡೆದಿದ್ದರು.. ಆದ್ರೆ ಅದನ್ನು ಹಿಂತಿರುಗಿಸಲು ಆಗಿರಲಿಲ್ಲ.. ಇದರಿಂದ ಆತ ಆಕ್ರೋಶಗೊಂಡಿದ್ದ.. ಬಾಲಕಿ ಏಳನೇ ತರಗತಿ ರಿಸಲ್ಟ್ ನೋಡಲು ಶಾಲೆ ಬಳಿ ಬರುವುದನ್ನು ಅರಿತಿದ್ದ ಆತ ಅಲ್ಲಿಗೆ ಹೋಗಿದ್ದ.. ಇತರ ಆರೋಪಿಗಳ ಜೊತೆ ಸೇರಿ ಆತ ಬಾಲಕಿಯನ್ನು ಶಾಲಾ ಕೊಠಡಿಯೊಳಗೆ ಎಳೆದೊಯ್ದಿದ್ದಾನೆ..
ಶಾಲಾ ಕೊಠಡಿಯಲ್ಲೇ ಆಕೆಯ ಮೇಲೆ ಲೈಂಗಿನ ದೌರ್ಜನ್ಯ ಎಸಗಿದ್ದಾನೆ.. ಇದನ್ನು ಇತರ ಆರೋಪಿಗಳು ಮೊಬೈಲ್‌ಗಳಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.. ಬೇಸಿಗೆ ರಜೆ ಇದ್ದ ಕಾರಣ ಶಾಲೆಯಲ್ಲಿ ಯಾರೂ ಇರಲಿಲ್ಲ.. ಹೀಗಾಗಿ ಈ ಪೈಶಾಚಿಕ ಕೃತ್ಯ ಎಸಗಿದ್ದಾರೆ..
ನಂತರ ಆ ವಿಡಿಯೋ ತೋರಿಸಿ ಹಣ ನೀಡುವಂತೆ ಬ್ಲಾಕ್‌ಮೇಲ್ ಮಾಡುತ್ತಿದ್ದರು ಎನ್ನಲಾಗಿದೆ.. ಯಾವಾಗ ವಿಡಿಯೋ ಎಲ್ಲಾ ಕಡೆ ಹರಿದಾಡಲು ಶುರು ಮಾಡಿತೋ ಆಗ ಪೋಷಕರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.. ಪೊಲೀಸರು ಕೂಡಲೇ ಆರೋಪಿಗಳನ್ನು ಬಂಧಿಸಿದ್ದಾರೆ..