ಬೆಂಗಳೂರು; ಬಿಎಂಟಿಸಿ ಬಸ್ ನಿರ್ವಾಹಕನೊಬ್ಬ ಯುತಿಯೊಬ್ಬಳೊಂದಿಗೆ ಅನುಚಿತವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ.. ಈ ಸಂಬಂಧ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.. ವಿಡಿಯೋದಲ್ಲಿ ಸೀಟಿನಲ್ಲಿ ಯುವತಿಯೊಬ್ಬಳು ಕುಳಿತಿದ್ದು, ಸೀಟ್ ಪಕ್ಕ ಕೈಇಟ್ಟುಕೊಳ್ಳುವ ಜಾಗದಲ್ಲಿ ಕಂಡಕ್ಟರ್ ಕುಳಿತಿದ್ದಾನೆ.. ಯುವತಿಗೆ ಒರಗಿಕೊಂಡು ಕೂತಿದ್ದಾನೆ..
ಬಸ್ ಖಾಲಿ ಇದ್ದರು ಕೂಡಾ ಕಂಡಕ್ಟರ್ ಯುವತಿ ಇರುವ ಸೀಟ್ನ ಹ್ಯಾಂಡಲ್ ಮೇಲೆ ಕುಳಿತು, ಯುವತಿಗೆ ಕಿರಿಕಿರಿ ಉಂಟು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.. KA41D2500 ಸಂಖ್ಯೆಯ ಬಸ್ ನಲ್ಲಿ ಕಂಡಕ್ಟರ್ ಬೇಕಂತಲೇ ಹೀಗೆ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.. ಈ ಕುರಿತಂತೆ @karnatakaportf ಟ್ವಿಟರ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಲಾಗಿದೆ.. ಕಂಡಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹ ಮಾಡಿದ್ದಾರೆ..
ನವದೆಹಲಿ; ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಇತ್ತೀಚೆಗಷ್ಟೇ ಕೇಜ್ರಿವಾಲ್ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅಬಕಾರಿ ಹಗರಣದ ಸಂಬಂಧ ಜೈಲು ಸೇರಿದ್ದರೂ ಕೂಡಾ ಅವರು ರಾಜೀನಾಮೆ ನೀಡಿರಲಿಲ್ಲ. ಆದ್ರೆ ಇಂದು ಅವರು ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.. ಎರಡು ದಿನಗಳ ನಂತರ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.
ದೆಹಲಿಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಆಗ ದೆಹಲಿಯ ಜನರು ತೀರ್ಪು ನೀಡುವರು. ಈಗಾಗಲೇ ನ್ಯಾಯಾಲಯದಿಂದ ನನಗೆ ತೀರ್ಪು ಬಂದಿದೆ. ಈಗ ತೀರ್ಪು ಜನರಿಂದ ಬರಬೇಕಿದೆ.. ಹೀಗಾಗಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಜನರ ತೀರ್ಪಿನ ಆಧಾರದ ಮೇಲೆ ನಾನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಮದ್ಯ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಇಡಿ ಮತ್ತು ಸಿಬಿಐ ಅಧಿಕಾರಿಗಳು ಅರವಿಂದ್ ಕೇಜ್ರಿವಾಲ್ ಅವರನ್ನು ಆರು ತಿಂಗಳ ಹಿಂದೆ ಬಂಧಿಸಿದ್ದರು. ಅಂದಿನಿಂದ ಕೇಜ್ರಿವಾಲ್ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ವಿಜಯಪುರ; ಕಾಂಗ್ರೆಸ್ ಪಕ್ಷ ಅಂದ್ರೇನೇ ಮುಸ್ಲಿಂ ಪಾರ್ಟಿ. ಕಾಂಗ್ರೆಸ್ ನವರು ಮುಸ್ಲಿಂ ತುಷ್ಟೀಕರಣ ಬಿಟ್ಟರೆ ಬೇರೇನೂ ಮಾಡೋದೇ ಇಲ್ಲ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆದಿದ್ದಾರೆ.. ವಿಜಯಪುರದಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಮುಸ್ಲಿಂ ಪಾರ್ಟಿ ಇದ್ದಂತೆ, ಇದು ನಮ್ಮ ಹಿಂದೂಗಳಿಗೆ ಅರ್ಥವೇ ಆಗುತ್ತಿಲ್ಲ. ಈ ಬಗ್ಗೆ ಅವರು ಜಾಗೃತತರವಾಗದೇ ಜಾತ್ಯತೀತ ಭ್ರಮೆಯಲ್ಲಿ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ..
ಲೋಕಸಭಾ ಚುನಾವಣೆಯಲ್ಲಿ ಸ್ವಲ್ಪ ಸ್ಥಾನಗಳು ಕಡಿಮೆಯಾಗದ್ದರಿಂದ ಮೋದಿ ಸೊಕ್ಕು ಕಡಿಮೆಯಾಗಿದೆ ಎಂದು ಕೆಲವರು ಹೇಳುತ್ತಾರೆ.. ಆದ್ರೆ ಮೋದಿ ಸೊಕ್ಕು ಕಡಿಮೆಯಾಗಿಲ್ಲ. ಹಿಂದೂಗಳ ಶಕ್ತಿ ಕಡಿಮೆಯಾಗಿದೆ. ಬಿಜೆಪಿಗೆ 350 ಸೀಟು ಕೊಟ್ಟಿದ್ದರೆ ಇವರು ಬಾಯಿಬಿಡುತ್ತಿರಲಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.. ಜನರು ಫ್ರೀ ಬಸ್, ಫ್ರೀಂ ಅಕ್ಕಿಗೆ ದೇಶವನ್ನು ಬಲಿ ಕೊಡ್ತಿದ್ದಾರೆ.. ಕಾಂಗ್ರೆಸ್ಗೆ ಮತ ನೀಡಿ ಹಿಂದೂಗಳು ತಲೆತಗ್ಗಿಸುವಂತೆ ಮಾಡಿದ್ದಾರೆ ಎಂದೂ ಅವರು ಅಬ್ಬರಿಸಿದ್ದಾರೆ..
ಬೆಂಗಳೂರು; ವಿಧಾನಸೌಧದ ಮುಂದೆ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದ ವೇಳೆ ಸಿಎಂ ಸಿದ್ದರಾಮಯ್ಯ ಇದ್ದ ವೇದಿಕೆಗೆ ಯುವಕನೊಬ್ಬ ನುಗ್ಗಿದ್ದಾರೆ.. ವೇದಿಕೆಗೆ ಇದ್ದಕ್ಕಿದ್ದಂತೆ ಯುವಕ ನುಗ್ಗಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.. ಯುವಕ ವೇದಿಕೆ ಮೇಲೆ ಏರುತ್ತಿದ್ದಂತೆ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು, ವೇದಿಕೆಯಿಂದ ಕೆಳಗಿಳಿಸಿದ್ದಾರೆ.
ಭದ್ರತಾಲೋಪದಿಂದಲೇ ಈ ಘಟನೆ ನಡೆದಿದೆ.. ವಿಧಾನಸೌಧದ ಮುಂಭಾಗ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.. ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.. ಸಿಎಂ ವೇದಿಕೆ ಮೇಲಿ ಕುಳಿತಿದ್ದಾಗ ಯುವಕನೋರ್ವ ವೇದಿಕೆ ಮೇಲೇರಿದ್ದಾನೆ.. ಕೈಯಲ್ಲಿದ್ದ ಶಾಲುವನ್ನು ಸಿಎಂ ಸಿದ್ದರಾಮಯ್ಯ ಅವರತ್ತ ಎಸೆದಿದ್ದಾನೆ.
ಕೂಡಲೇ ಎಚ್ಚೆತ್ತುಕೊಂಡು ಭದ್ರತಾ ಸಿಬ್ಬಂದಿ ಆತನನ್ನು ಹಿಡಿಯಲು ಹರಸಾಹಸಪಟ್ಟಿದೆ.. ಕೊನೆಗೆ ಆತನನ್ನು ಉರುಳಾಡಿಸಿ ಹಿಡಿದಿದೆ.. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಲಾಯಿತು.. ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ..
Post Views: 39