CrimeNational

ಶಾರ್ಟ್‌ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಪಾರಂಪರಿಕ ಕಟ್ಟಡ

ಹೈದರಾಬಾದ್:‌ ಬ್ರಿಟೀಷರ ಕಾಲದಲ್ಲಿ ಕಟ್ಟಿದ್ದ ಹೈತಿಹಾಸಿಕ ಕಟ್ಟಡವೊಂದು ಬೆಂಕಿಯ ಕೆನ್ನಾಲಿಗೆಗೆ  ಸುಟ್ಟ ಭಸ್ಮವಾಗಿದೆ.  ಶಾರ್ಟ್‌ ಸರ್ಕ್ಯೂಟ್‌ನಿಂದ ಈ ಪಾರಂಪರಿಕ ಕಟ್ಟಡಕ್ಕೆ ಬೆಂಕಿ ಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದವು ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಬೆಂಕಿ ನಂದಿಸುವ ಕಾರ್ಯ ನಡೆಯಿತು. ಆದರೆ ಆ ಹೊತ್ತಿಗಾಗಲೇ ಹೆಚ್ಚಾಗಿ ಮರಮುಟ್ಟುಗಳಿಂದ ತಯಾರು ಮಾಡಿದ್ದ ಕಟ್ಟಡವಾಗಿದ್ದರಿಂದ ಅರ್ಧ ಸುಟ್ಟು ಬೂದಿಯಾಗಿತ್ತು. 1878ರಲ್ಲಿ ಬ್ರಿಟೀಷರು ಈ ಕ್ಲಬ್‌ ಅನನು ಕಟ್ಟಿಸಿದ್ದರು. 144ವರ್ಷಗಳ ಇತಿಹಾಸ ಈ ಕಟ್ಟಡಕ್ಕಿದೆ. ಎಂಟು ಸಾವಿರ ಸದಸ್ಯರು ಈ ಕ್ಲಬ್‌ನ ಸದಸ್ಯರಾಗಿದ್ದಾರೆ ಎಂಬ ಮಾಹಿತಿಯಿದೆ.

ಬೆಳಗಿನ ಜಾವ 3.15ಕ್ಕೆ ಬೆಂಕಿ ಬಿದ್ದರುವ ಸುದ್ದಿ ತಿಳಿದ ಕೂಡಲೇ ನಾವು  ಏಳು ಅಗ್ನಿಶಾಮಕ ವಾಹನಗಳನ್ನು ಕಳುಹಿಸಿಕೊಡಲಾಯಿತು. ಛಾವಣಿ ಸೇರಿದಂತೆ ಪೀಠೋಪಕರಣಗಳು ಕ್ಷಣಮಾತ್ರದಲ್ಲಿ ಸುಟ್ಟು ಭಸ್ಮವಾಗಿವೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ಮಧುಸೂದನ್ ರಾವ್ ತಿಳಿಸಿದ್ದಾರೆ.

 

Share Post