BengaluruCrime

ಪ್ರಾಣಕ್ಕೆ ಕುತ್ತು ತಂದ ಗ್ಯಾಸ್‌ ಗೀಸರ್:‌ ತಾಯಿ ಮಗಳು ಸಾವು

ಬೆಂಗಳೂರು:   ಬಾಡಿಗೆ ಮನೆಯಲ್ಲಿ ವಾಸ ಮಾಡುವ 80% ಜನ  ಬಿಸಿ ನೀರಿನಬ ಸ್ನಾನಕ್ಕಾಗಿ ವಾಟರ್‌ ಹೀಟರ್‌ ಅಥವಾ ಗ್ಯಾಸ್‌ ಗೀಸರ್‌ ಬಳಸುವುದು ವಾಡಿಕೆ. ಇಂತಹ ಅಪಾಯಕಾರಿ ವಸ್ತುಗಳಿಂದ ಪ್ರಾಣ ಕಳೆದುಕೊಂಡಿರುವ ವರದಿಗಳನ್ನು ನಾವು ಈಗಾಗಲೇ ಕೇಳಿದ್ದೇವೆ. ಈಗ ಅಂತದ್ದೇ ಮತತ್ತೊಂದು ದಾರುಣ ಘಟನೆಯೊಂದು ನಡೆದಿದೆ. ಸ್ನಾನ ಗೃಹದಲ್ಲಿದ್ದ ಗ್ಯಾಸ್‌ನಿಂದ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿ ತಾಯಿ-ಮಗಳು ಸಾವನ್ನಪ್ಪಿರುವ ಘಟನೆ ಚಿಕ್ಕಬಾಣಾವರದಲ್ಲಿ ನಡೆದಿದೆ. ಮಂಗಳಾ(35) ಹಾಗೂ ಅವರ ಮಗು ಗೌತಮಿ (7) ಮೃತ ದುರ್ದೈವಿಗಳು.

ಇಂದು ಬೆಳಗ್ಗೆ ಮಗಳಿಗೆ ಸ್ನಾನ ಮಾಡಿಸಲು ಹೋದಾಗ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿದೆ. ಇದು ಅವರ ಗಮನಕ್ಕೆ ಬಾರದೆ ಮನೆ ತುಂಬಾ ಅನಿಲ ಆವರಿಸಿದೆ. ವಾಸನೆಯಿಂದ ತಾಯಿ ಮಗಳು ಇಬ್ಬರೂ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ದುರಂತ ನಡೆದ ಸಮಯದಲ್ಲಿ ಮಂಗಳಾ ಪತಿ ಕೆಲಸಕ್ಕೆ ಹೋಗಿರುವುದಾಗಿ ಮಾಹಿತಿಯಿದೆ. ಬೆಳಗ್ಗೆಯಿಂದ ಮಂಗಳಾ ಮೆನಯಿಂದ ಆನೆ ಬರದೆ ಇರುವುದನ್ನು ಗಮನಿಸಿದ ಮನೆ ಓನರ್‌ ಹೀಗು ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಕೂಡಲೇ ಮನೆ ಓನರ್‌ ಪೊಲೀಸರಿಗೆ ಮಾಹಿತಿ ತಿಳಿಸದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share Post