National

ಭಯೋತ್ಪಾದಕ ಸಂಘಟನೆ ಐಸಿಸ್‌ ಪರ ಪ್ರಚಾರ; ಒಬ್ಬನ ಅರೆಸ್ಟ್‌

ಹೈದರಾಬಾದ್: ಭಯೋತ್ಪಾದ ಸಂಘಟನೆ ಐಸಿಸ್‌ ಪರವಾಗಿ ಪ್ರಚಾರ ನಡೆಸುತ್ತಿದ್ದಾನೆಂಬ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಹೈದರಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಹಲವು ತಿಂಗಳುಗಳಿಂದ ಐಸಿಸ್‌ ಪರವಾಗಿ ಪ್ರಚಾರ ನಡೆಸುತ್ತಿದ್ದನೆಂಬ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಕ್ರಂ ಬ್ರಾಂಚ್‌ ಪೊಲೀಸರು ಬಂಧಿಸಿದ್ದಾರೆ.

     ಹೈದರಾಬಾದ್‌ನ ಫಲಕ್‌ನುಮಾ ನಿವಾಸಿಯಾಗಿರುವ ಮೊಹಮದ್‌ ಅಬುಸಾನಿ ಎಂಬಾತನೇ ಬಂಧಿತ ಆರೋಪಿ. ಈತ ಈ ಹಿಂದೆ ಕೂಡಾ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸ ಮಾಡಿದ್ದ. ವಿಶ್ವದಾದ್ಯಂತ ಯುವಕರನ್ನು ಜಿಹಾದಿಗಳನ್ನಾಗಿ ಸಿದ್ಧಪಡಿಸುತ್ತಿರುವ ಐಸಿಸ್ ಸದಸ್ಯರೊಂದಿಗೆ ಆರೋಪಿ ನಿರಂತರ ಸಂಪರ್ಕದಲ್ಲಿದ್ದನೆಂದು ಗೊತ್ತಾಗಿದೆ.

ಬಂಧಿತ ಆರೋಪಿ ತನ್ನ ಸ್ನೇಹಿತರು ಮತ್ತು ಸಂಬಂಧಿಕರಿಗೆ ಐಸಿಸ್‌ ಪಾಠ ಹೇಳುತ್ತಿದ್ದ. ಸಾಮಾಜಿಕ ಮಾಧ್ಯಮಗಳ ಮೂಲಕ ಜಿಹಾದ್ ಕಡೆಗೆ ಆಕರ್ಷಿತರಾಗಲು ಅವರಿಗೆ ವಿಡಿಯೋಗಳನ್ನು ಕಳುಹಿಸುತ್ತಿದ್ದನೆಂದು ಗೊತ್ತಾಗಿದೆ.

Share Post