CrimeInternational

ಘೋರ ದುರಂತ; ಶಾಲಾ ಕಟ್ಟಡ ಕುಸಿದು 22 ವಿದ್ಯಾರ್ಥಿಗಳು ದುರ್ಮರಣ!

ಶಾಲಾ ಕಟ್ಟಡವೊಂದು ಕುಸಿದುಬಿದ್ದು, 22 ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ.. ಹಲವಾರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದು, ಅವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ನೈಜೀರಿಯಾದಲ್ಲಿ ಇಂತಹದ್ದೊಂದು ಘೋರ ದುರಂತ ನಡೆದಿದೆ..

ಇಲ್ಲಿನ ಬುಸಾಬುಜಿ ಕಮ್ಯೂನಿಟಿಯಲ್ಲಿ ಸೇಂಟ್ಸ್‌ ಅಕಾಡೆಮಿ ಶಾಲೆಯಲ್ಲಿ ಪಾಠ ಪ್ರವಚನಗಳು ನಡೆಯುತ್ತಿದ್ದವು.. ಎರಡಂತಸ್ತಿನ ಈ ಕಟ್ಟಡ ತುಂಬಾ ಹಳೆಯದಾಗಿದ್ದು, ಇದ್ದಕ್ಕಿದ್ದಂತೆ ಕುಸಿದಿದೆ.. ಇದರಿಂದಾಗಿ, ಅವಶೇಷಗಳಡಿ ಸಿಲುಕಿ  22 ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ..

ಅವಶೇಷಗಳಡಿ 154 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು. ಅದರಲ್ಲಿ 132 ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ. ಇದರಲ್ಲಿ ಬಹುತೇಕರಿಗೆ ಅಂಗಾಂಗಗಳು ಊನವಾಗಿವೆ.. ಕೆಲವರು ತೀವ್ರವಾಗಿ ಗಾಯಗೊಂಡಿದ್ದಾರೆ.. ಎಲ್ಲರನ್ನೂ ವಿವಿಧ ಆಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ..

 

Share Post