CrimeNational

7 ಮಕ್ಕಳನ್ನು ಬೀದಿಯಲ್ಲಿ ಬಿಟ್ಟು ತಾಯಿ ಹೋಗಿದ್ದೆಲ್ಲಿಗೆ..?

ಕನೌಜ್; ತಾಯಿಯೇ ದೇವರು ಎನ್ನುತ್ತಾರೆ.. ತಾನು ಉಪವಾಸ ಇದ್ದು, ಮಕ್ಕಳನ್ನು ಸಾಕುವ ಎಷ್ಟೋ ಹೆಣ್ಣು ಮಕ್ಕಳನ್ನು ನೋಡಿದ್ದೇವೆ.. ಆದ್ರೆ ಕೆಲವು ಮಹಿಳೆಯರು ರಾಕ್ಷಸಿಯರೂ ಆಗಿರುತ್ತಾರೆ.. ಅದಕ್ಕೆ ಉದಾಹರಣೆ ಈ ಸ್ಟೋರಿ.. ಇಲ್ಲಿ ಮಹಿಳೆಯೊಬ್ಬರು ತನ್ನ ಏಳು ಮಕ್ಕಳನ್ನು ಬಿಟ್ಟು ಪರಾರಿಯಾಗಿದ್ದಾಳೆ.. ಇದರಿಂದಾಗಿ ಪುಟ್ಟ ಪುಟ್ಟ ಮಕ್ಕಳು ಕಂಗಾಲಾಗಿದ್ದಾರೆ.. ಉತ್ತರ ಪ್ರದೇಶದ ಕೌಜ್‌ ಜಿಲ್ಲೆಯ ಗುರ್ಸಹೈಗಂಜ್‌ ಎಂಬಲ್ಲಿ ಈ ಘಟನೆ ನಡೆದಿದೆ..
15 ವರ್ಷದ ಹಿಂದೆ ಮಹಿಳೆ ಮದುವೆಯಾಗಿದ್ದಳು.. ಆಕೆಯ ಗಂಡ ಕೆಲಸದ ನಿಮಿತ್ತ ಬೇರೆ ಬೇರೆ ಊರುಗಳಲ್ಲಿ ವಾಸವಿರುತ್ತಿದ್ದ.. ಇತ್ತ ಈ ಮಹಿಳೆ ಏಳು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಳು.. ಇದರ ಜೊತೆಗೆ ಆಕೆ ಬೇರೆ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಆರೋಪಿಸಲಾಗಿದೆ.. ಈ ಕಾರಣಕ್ಕಾಗಿಯೇ ಆಕೆ ಎರಡು ಬಾರಿ ಮನೆ ಬಿಟ್ಟು ಓಡಿಹೋಗಿದ್ದಳಂತೆ.. ಇದೀಗ ಮತ್ತೆ ಮೂರು ದಿನಗಳ ಹಿಂದೆ ತಾಯಿ ಎಲ್ಲಾ ಏಳು ಮಕ್ಕಳನ್ನೂ ಬಿಟ್ಟು ಪರಾರಿಯಾಗಿದ್ದಾಳೆ.. ಇದರಿಂದ ಕಂಗಾಲಾದ ಮಕ್ಕಳು ಅಳುತ್ತಿದ್ದಾರೆ..
ಇನ್ನು ಮಹಿಳೆಯ ಸೋದರ ಮಾವನ ಪ್ರಕಾರ ಆಕೆ ಮತ್ತೊಬ್ಬ ಮಹಿಳೆಯ ಜೊತೆ ಹೋಗಿ ವೇಶ್ಯಾವಾಟಿಕೆ ದಂಧೆಯಲ್ಲಿ ಸೇರಿದ್ದಾಳಂತೆ.. ಈ ಬಗ್ಗೆ ಸೋದರ ಮಾವ ಪೊಲೀಸರಿಗೆ ದೂರು ನೀಡಿದ್ದು, ಮಹಿಳೆಯನ್ನು ಹುಡುಕಿಕೊಡುವಂತೆ ಮನವಿ ಮಾಡಿಕೊಂಡಿದ್ದಾಳೆ..

Share Post