CrimeNational

ರೋಡ್‌ ರೋಲರ್‌ ಕದ್ದ ಕಿರಾತಕರು: ಬೆಚ್ಚಿಬಿದ್ದ ಮಾಲೀಕ

ತೆಲಂಗಾಣ:   ಇತ್ತೀಚೆಗಷ್ಟೇ ಎಂಜಿನಿಯರ್‌ ಒಬ್ಬ ರೈಲ್ವೆ ಎಂಜಿನ್‌ ಅನ್ನು ಹಳೆ ಸಾಮಾನು ಮಾರಾಟ ಮಾಡುವವರ ಗುಜರಿ ಅಂಗಡಿಗೆ ಹಾಕಿದ್ದ ಆ ಸಾಲಿಗೆ ಈಗ ರೋಡ್‌ ರೋಲರ್‌ ಕೂಡ ಸೇರಿದೆ. ಹೌದು ವಿಕಾರಾಬಾದ್ ಜಿಲ್ಲೆ ತಾಂಡೂರಿನಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ ಇದ್ದಕ್ಕಿದ್ದಂತೆ ರಸ್ತೆಯಲ್ಲಿದ್ದ ರೋಡ್ ರೋಲರ್ ಕಳ್ಳತನವಾಗಿದೆ. ಸೇತುವೆ ನಿರ್ಮಾಣ ಕೆಲಸಕ್ಕೆಂದು ತೆಗೆದುಕೊಂಡು ಹೋದವರು ಕೆಲವು ತಿಂಗಳುಗಳ ಕಾಲ ಅಲ್ಲೇ ಬಿಟ್ಟಿದ್ದಾರೆ. ಓನರ್‌ ಕೇಲದ ಕಾರಣ ರೋಲರ್‌ನ್ನು ಲಾರಿಯಲ್ಲಿ ತುಂಬಿಸಿ ಹಳೆ ಲಗೇಜ್ ಕಂಪಾರ್ಟ್ ಮೆಂಟ್‌ನಲ್ಲಿ ಹಾಕಿದ್ದಾರೆ. ರೋಲರ್‌ನ ಬಿಡಿ ಭಾಗಗಳನ್ನು ಕಂಡು ಮಾಲೀಕ ಬೆಚ್ಚಿಬಿದ್ದಿದ್ದಾರೆ.

ಸ್ಥಳೀಯ ಗುಂಡ್ಲಮಡುಗು ಪಂಗಡದ ನರಸಿಂಹರೆಡ್ಡಿ 5 ತಿಂಗಳ ಹಿಂದೆ ಸೇತುವೆ ನಿರ್ಮಾಣಕ್ಕೆ ಕಾಂಟ್ರಾಕ್ಟ್‌ ತೆಗೆದುಕೊಂಡಿದ್ದರು.  ಈ ಕಾಮಗಾರಿಯ ಬಿಲ್  ಬರದ ಕಾರಣ ಕಾಮಗಾರಿ ನಿಮಿತ್ತ ಬೇರೆಡೆಗೆ ತೆರಳಿದ್ದರು. ನಂತರ ಅಲ್ಲಿಯೇ ಬಿಟ್ಟು ಹೋಗಿದ್ದ ರೋಡ್ ರೋಲರ್ ತೆಗೆದುಕೊಂಡು ಹೋಗಲು ಬಂದಾಗ ಆತನಿಗೆ ಶಾಕ್‌ ಕಾದಿತ್ತು. ಯಾಕಂದ್ರೆ  ಜಿನುಗುರ್ತಿಗೆ ಸೇರಿದ ಶಾಬೋದ್ದಿನ್ ಎಂಬಾತ  ರೋಲರ್ ಅನ್ನು ಲಾರಿಯಲ್ಲಿ ತೆಗೆದುಕೊಂಡು ಹೋಗಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಕೂಡಲೇ ಶಾಬೋದ್ದಿನ್‌ ಬಳಿ ಹೋಗಿ ರೋಲರ್‌ ಬಗ್ಗೆ ಕೇಳಿದಾಗ ಯಾರೋ ಬಂದು ರೋಲರ್‌ ಕೊಂಡುಕೊಂಡಿದ್ದೇವೆ ಎಂದು ಅದನ್ನು ಒಂದು ಅಡ್ರೆಸ್‌ಗೆ ತಲುಪಿಸಲು ತಿಳಿಸಿದ್ದರಂತೆ ಅವರ ಮಾಹಿತಿಯಂತೆ ಆತ ರೋಲರ್‌ ಅನ್ನು ಹಳೆ ಸಾಮಾನುಗಳ ಗೋದಾಮಿಗೆ ತಲುಪಿಸಿದ್ದಾಗಿ ಹೇಳಿದ್ದಾನೆ. ಸ್ಥಳಕ್ಕೆ ತೆರಳಿ ನೋಡಿದಾಗ ರೋಲರ್‌ನ ಬಿಡಿ ಭಾಗಗಳು ಕಂಡು ಮಾಲೀಕ ದಂಗಾಗಿದ್ದಾನೆ.

Share Post