Cinema

ಪಿಆರ್‌ಕೆ ಬ್ಯಾನರ್‌ನ ಒನ್‌ ಕಟ್‌ ಟು ಕಟ್‌ ಟ್ರೇಲರ್‌ ರಿಲೀಸ್‌

ಬೆಂಗಳೂರು: ದಿವಂಗತ ಪುನೀತ್ ರಾಜ್ ಕುಮಾರ್ ಸ್ಥಾಪಿಸಿರುವ ಪಿಆರ್​​ಕೆ ಬ್ಯಾನರ್​​ನಲ್ಲಿ ನಿರ್ಮಾಣವಾಗಿರುವ ಒನ್ ಕಟ್ ಟು ಕಟ್ ಕಾಮಿಡಿ ಸಿನಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಡ್ಯಾನಿಶ್ ಸೇಠ್ ವಿಭಿನ್ನ ಪಾತ್ರದಲ್ಲಿ ಅಭಿನಯಿಸುತ್ತಿರೋ ಇದಾಗಿದೆ. ವಂಶಿಧರ್ ಭೋಗರಾಜು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇಂದು ಬಿಡುಗಡೆಯಾಗಿರುವ ಟ್ರೇಲರ್‌ ನಲ್ಲಿ ಕಾಮಿಡಿ ಇದೆ. ಜೊತೆಗೆ ಶಿಕ್ಷಣದ ಗಂಭೀರತೆಯನ್ನು ತೋರಿಸಲಾಗಿದೆ.

ಈ ಚಿತ್ರದಲ್ಲಿ ನಾಯಕ ಡ್ರಾನಿಷ್‌ ಶಿಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿಕ್ಷಕನ ಸುತ್ತಲೇ ಹೆಣೆದಿರುವ ಈ ಚಿತ್ರ ಕಾಮಿಡಿ ಪ್ರಧಾನವಾದ ಚಿತ್ರ. ಸಂಯುಕ್ತ ಹೊರನಾಡ್ ನಾಯಕಿಯಾಗಿ ನಟಿಸಿದ್ದಾರೆ. ಪ್ರಕಾಶ್ ಬೆಳವಾಡಿ, ವಿನೀತ್ ಬೀಪ್ ಕುಮಾರ್ ಮತ್ತು ಸಂಪತ್ ಮೈತ್ರೇಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

 

 

Share Post