National

ವಿಚ್ಛೇದಿತ ಪತಿಗೆ ಪತ್ನಿ ಜೀವನಾಂಶ ನೀಡಬೇಕೆಂದು ಕೋರ್ಟ್‌ ಮಹತ್ವದ ತೀರ್ಪು

ಔರಂಗಾಬಾದ್​(ಮಹಾರಾಷ್ಟ್ರ): ಸರ್ಕಾರಿ ಕೆಲಸದಲ್ಲಿದ್ದು, ಉತ್ತಮ ಸಂಬಳ ಪಡೆದುಕೊಳ್ಳುತ್ತಿರುವ ವಿಚ್ಛೇದಿತ ಪತ್ನಿ ತನ್ನ ವಿಚ್ಛೇದಿತ ಪತಿಗೆ ಜೀವನಾಂಶ ನೀಡಬೇಕೆಂದು ಔರಂಗಾಬಾದ್‌ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ನ್ಯಾ.ಶ್ರೀಮತಿ ಭಾರತಿ ಡಾಂಗ್ರೆ ಅವರು ಈ ಮಹತ್ವದ ಆದೇಶ ನೀಡಿದ್ದು, ನಾಂದೇಡ್​ ಸಿವಿಲ್​ ಕೋರ್ಟ್​ ಆದೇಶವನ್ನು ಎತ್ತಿಹಿಡಿದ್ದಾರೆ. 

    ನಾಂದೇಡ್‌ನ ದಂಪತಿ 1992ರಲ್ಲಿ ಮದುವೆಯಾಗಿದ್ದರು. ನಂತರ ನಾಂದೇಡ್‌ ಸಿವಿಲ್‌ ಕೋರ್ಟ್‌ನಲ್ಲಿ 2015ರಲ್ಲಿ ವಿಚ್ಛೇದನ ಪಡೆದಿದ್ದರು. ಹೀಗಾಗಿ, ಹಿಂದೂ ವಿವಾಹ ಕಾಯ್ದೆ 1955ರ ಸೆಕ್ಷನ್​ 24 ಮತ್ತು 25ರ ಅಡಿಯಲ್ಲಿ ತನ್ನ ಹೆಂಡತಿಯಿಂದ ಜೀವನಾಂಶ ಮತ್ತು ಜೀವನಾಧಾರ ವೆಚ್ಚ ಕೋರಿ ಗಂಡ ಅರ್ಜಿ ಸಲ್ಲಿಸಿದ್ದರು. ನನಗೆ ಯಾವುದೇ ಆದಾಯ ಬರುತ್ತಿಲ್ಲ. ತನ್ನ ವಿಚ್ಚೇದಿತ ಹೆಂಡತಿ ಸರ್ಕಾರಿ ಕೆಲಸದಲ್ಲಿದ್ದು, ಉತ್ತಮ ಸಂಬಳ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ನನಗೆ ಜೀವನಾಂಶ ಕೊಡಿಸಬೇಕೆಂದು ಪತಿ ಮನವಿ ಮಾಡಿದ್ದ. ಈ ಅರ್ಜಿಯನ್ನು ಪರಿಗಣಿಸಿದ್ದ ನಾಂದೇಡ್‌ ಕೋರ್ಟ್‌, ಪತಿಗೆ ಶಾಶ್ವತ ಜೀವನಾಂಶ ಕೊಡುವಂತೆ ಆದೇಶ ನೀಡಿತ್ತು.

ಇದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್‌ ಮೆಟ್ಟಿಲೇರಿದ್ದು, ಅಲ್ಲೂ ಕೂಡಾ ಕೋರ್ಟ್‌ ಕೆಳನ್ಯಾಯಾಲಯ ನೀಡಿದ್ದ ಆದೇಶವನ್ನೇ ಎತ್ತಿಹಿಡಿದಿದೆ.

Share Post