ಪೊಲೀಸ್ ಕಸ್ಟಡಿಯಲ್ಲಿ ನಟ ಚೇತನ್: ನನ್ನ ಪತಿಯನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ಪತ್ನಿ ಫೇಸ್ಬುಕ್ ಲೈವ್
ಬೆಂಗಳೂರು: ಎರಡು ವರ್ಷಗಳ ಹಿಂದಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರನ್ನು ನಿಂದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚೇತನ್ ಅವರನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ. ಯಾವುದೇ ನೊಟೀಸ್ ನೀಡದೆ ಅವರನ್ನು ಬಂಧನ ಮಾಡಿರುವುದಕ್ಕೆ ಚೇತನ್ ಪತ್ನಿ ಮೇಘನಾ ಫೇಸ್‌ಬುಕ್ ಲೈಬ್ ಬಂದು ತನ್ನ ಪತಿಯನ್ನು ಕಿಡ್ಯ್ನಾಪ್ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪ್ರಚೋದನಾತ್ಮಕ ಪೋಸ್ಟ್‌ಗಳನ್ನ ಹಾಕದಂತೆ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಮಾಡಿದ್ರು. 2ವರ್ಷಗಳ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಕೃಷ್ಣ ದೀಕ್ಷಿತ್ ಅವರು ಆರೋಪಿಯನ್ನು ಬಂಧಿಸುವ ಮೊದಲೇ ಜಾಮೀನು ನೀಡಿದ್ದಾರೆ ಎಂದು ಟ್ವೀಟ್ ಮಾಡಿದ್ದ ನಟ ಚೇತನ್. ಈಗ ಅದೇ ಟ್ವೀಟನ್ನು ಕೋಟ್ ಮಾಡಿ, ಹಿಜಾಬ್ ವಿವಾದದ ಅರ್ಜಿ ವಿಚಾರಣೆಯಲ್ಲಿ ನ್ಯಾ.ಕೃಷ್ಣ ದೀಕ್ಷಿತ್ ಪೀಠದಲ್ಲಿದ್ದಾರೆ. ಈ ವಿಚಾರದಲ್ಲಿ ಅವರಿಗೆ ಸ್ಪಷ್ಟತೆ ಇದ್ಯಾ ಎಂದು ಪುನಃ ಫೆಬ್ರವರಿ 16ರಂದು ಟ್ವೀಟ್ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಶೇಷಾದ್ರಿಪುರಂ ಪೊಲೀಸರು ನಟ ಚೇತನ್ ಅವರ ಮನೆಗೆ ತೆರಳಿ ಅರೆಸ್ಟ್ ಮಾಡಿದ್ದಾರೆ.
ಪತ್ನಿ ಮೇಘನಾ ಫೇಸ್‌ಬುಕ್ ಲೈವ್-ಕಿಡ್ನ್ಯಾಪ್ ಮಾಡಿದ್ದಾರೆ
ಇನ್ನೂ ತನ್ನ ಪತಿಯನ್ನು ಬಂಧಿಸಿರುವ ಬಗ್ಗೆ ಪತ್ನಿ ಮೇಘನಾ ಕಿಡಿ ಕಾರಿದ್ದಾರೆ. ನೊಟೀಸ್ ನೀಡದೆ ನನ್ ಪತಿಯನ್ನು ಅರೆಸ್ಟ್ ಮಾಡಿದ್ದಾರೆ. ಯಾರಿಗೂ ಯಾವುದೇ ಮಾಹಿತಿ ನೀಡದೆ, ಸ್ಪಷ್ಟಪಡಿಸದೆ ನನ್ ಪತಿಯನ್ನ ಬಂಧನ ಮಾಡಿದ್ದಾರೆ. ಪೊಲೀಸ್ ಠಾಣೆ ಬಳಿ ಬಂದು ಕೇಳಿದ್ರೆ ನಾವು ಬಂಧಿಸಿಲ್ಲ ಅಂತಿದಾರೆ. ಹಾಗಾದ್ರೆ ನನ್ನ ಪತಿ ಎಲ್ಲೋದು. ಅವರ ಪೋನ್ ಸಿಗುತ್ತಿಲ್ಲ. ಅವರ ಅನುಚರರ ಪೋನ್ ಕೂಡ ಸ್ವಿಚ್ಛ ಆಫ್ ಬರ್ತಿದೆ. ಹಾಗಾದ್ರೆ ನನ್ನ ಪತಿಯನ್ನು ಯಾರೋ ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.