DistrictsPolitics

ರಾಜ್ಯದಲ್ಲಿ ಕಣ್ಣು, ಕಿವಿ, ಮೂಗಿಲ್ಲದ ಸರ್ಕಾರವಿದೆ; ಡಿ.ಕೆ.ಶಿವಕುಮಾರ್‌

ಸಕಲೇಶಪುರ; ರಾಜ್ಯದಲ್ಲಿ ಕಣ್ಣು, ಕಿವಿ, ಮೂಗಿಲ್ಲದ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು. ಮಂಗಳವಾರ ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದ ಅವರಣದಲ್ಲಿ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರಜಾದ್ವನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಿಜೆಪಿ ದುರಾಡಳಿತದ ಪರಿಣಾಮ ಬಡ, ಮದ್ಯಮವರ್ಗ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೀಡಿದ ಎಲ್ಲ ಯೋಜನೆಗಳನ್ನು ಮೊಟಕುಗೊಳಿಸುವ ಮೂಲಕ ಬಡವರ ವಿರೋಧಿ ಧೋರಣೆಗಳನ್ನು ಅನುಸರಿಸಿಕೊಂಡು ಬರುತ್ತಿದೆ . ಆದ್ದರಿಂದ, ಈ ದುಷ್ಟ ಸರ್ಕಾರದ ಸಂಹಾರವಾಗ ಬೇಕಾದರೆ ಜನರು ಜಾಗೃತರಾಗುವ ಅಗತ್ಯವಿದೆ ಎಂದರು.

 

ದೇವರು ವರ, ಶಾಪ ಯಾವುದನ್ನು ನೀಡುವುದಿಲ್ಲ ಅವಕಾಶ ಮಾತ್ರ ಕಲ್ಪಿಸುತ್ತಾನೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳುವ ಜಾಣ್ಮೆಯನ್ನು ಕ್ಷೇತ್ರದ ಮತದಾರರು ಬಳಸಿಕೊಳ್ಳ ಬೇಕು. ಬಿಜೆಪಿ ನಾಯಕರು ಈಗ ಬಿ.ಎಸ್ ಯಡಿಯೂರಪ್ಪನವರ ಬಗ್ಗೆ ಮೃದುವಾಗಿ ಮಾತನಾಡುತ್ತಿದೆ. ಅವರು ಅಧಿಕಾರ ನಡೆಸುತ್ತಿದ್ದ ವೇಳೆ ಬಿಜೆಪಿ ವರೀಷ್ಠರು ಅವರಿಗೆ ನೀಡಿದ ಕಿರುಕುಳವನ್ನು ಜನರು ಮರೆಯಬಾರದು. ಕರ್ನಾಟಕ ಸರ್ಕಾರ ಇಡಿ ದೇಶದಲ್ಲಿ ಭ್ರಷ್ಟಚಾರದ ಕೇಂದ್ರ ಎಂದು ಹಣೆಪಟ್ಟಿ ಕಟ್ಟಿಕೊಂಡಿದೆ. ಅಮಿತ್ ಷಾ ಸಹ ರಾಜ್ಯದಲ್ಲಿ ಭಷ್ಟಚಾರ ನಡೆಯುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಈಶ್ವರಪ್ಪ ಎಂಬ ಮಂತ್ರಿ ತನ್ನ ಕಾರ್ಯಕರ್ತನ ಹತ್ತಿರವೆ ಹಣ ಕೇಳಿ ಕಾರ್ಯಕರ್ತ ನೇಣು ಹಾಕಿಕೊಳ್ಳುವಂತಹ ಪರಿಸ್ಥಿತಿ ಸೃಷ್ಟಿಸಿದ್ದನ್ನು ಜನರು ಗಮನಿಸಿದ್ದಾರೆ ಎಂದರು.

 

ಎಚ್.ಡಿ ಕುಮಾರಸ್ವಾಮಿ ಕುಟುಂಬದೊಳಗಿನ ಕಲಹದಲ್ಲಿ ಸಿಲುಕಿ ಹೈರಾಣಾಗಿದ್ದರೆ ಅವರಿಗೆ ಸದ್ಯ ವಿಶ್ರಾಂತಿಯ ಅಗತ್ಯವಿದೆ. ಹಾಸನಕ್ಕೆ ರೇವಣ್ಣನೇ ಸುಪ್ರೀಮ್ ಇವರ ಅಂದ ದರ್ಭಾರ್ ತೊಲಗಿಸಲು ಈಗ ಕಾಲಕೂಡಿ ಬಂದಿದೆ ಎಂದರು. ನಾಡಿನ ಜನರ ನೋವು ಕೇಳುವ ಉದ್ದೇಶದಿಂದ ಪ್ರಜಾಧ್ವನಿ ಯಾತ್ರೆ ನಡೆಸುವ ವೇಳೆ ರಾಜ್ಯದ ಎಲ್ಲೇಡೆ ಜನರು ಬದಲಾವಣೆ ಬಯಸಿ ಕಾಂಗ್ರೆಸ್ ಬೆಂಬಲಿಸುತ್ತಿರುವುದು ಸ್ವಷ್ಟವಾಗಿ ಗೋಚರಿಸುತ್ತಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್,10 ಕೆ.ಜಿ ಪುಕ್ಕಟೆ ಅಕ್ಕಿ, ಮಹಿಳೆಯರಿಗೆ ತಿಂಗಳಿಗೆ 2000 ಸಾವಿರ ಹಣ ಖಚಿತವಾಗಿ ನೀಡಲಾಗುವುದು. ಈ ಭರವಸೆಗಳನ್ನು ಈಡೇರಿಸದಿದ್ದರೆ ಮುಂದೆ ಎಂದು ನಿಮ್ಮೆದುರು ಬರುವುದೆ ಇಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

 

 

Share Post