Bengaluru

ಬೆಂಗಳೂರಿನ ಮಿರಾಕಲ್‌ ಡ್ರಿಂಕ್ಸ್‌ ಕಟ್ಟಡದಲ್ಲಿ ಬೆಂಕಿ ಅನಾಹುತ

ಬೆಂಗಳೂರು; ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಆರ್‌ಟಿ ನಗರದ 80 ಅಡಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಅಗ್ನಿಶಾಮಕ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬಂದಿದ್ದರಿಂದ ಆಗಬಹುದಾಗಿದ್ದ ದೊಡ್ಡ ಅನಾಹುತ ತಡೆದಿದ್ದಾರೆ..

ಇದನ್ನೂ ಓದಿ; ನಾನೇ ಸುರಸುಂದರಾಂಗ, ಹುಡುಗಿಯರೆಲ್ಲಾ ನನ್ನೇ ಪ್ರೀತಿಸ್ತಾರೆ; ಹುಡುಗನೊಬ್ಬನ ವಿಚಿತ್ರ ಭ್ರಮಾ ಕಾಯಿಲೆ!

ಮಧ್ಯಾಹ್ನ 1.50ರ ಸುಮಾರಿಗೆ ಈ ಅಗ್ನಿ ಅವಘಡ ಸಂಭವಿಸಿದೆ.. ಇಲ್ಲಿನ ಮಿರಾಕಲ್ ಡ್ರಿಂಕ್ಸ್ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಕೆಳ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದು ಇಡೀ ಕಟ್ಟಡಕ್ಕೆ ಹಬ್ಬುವ ಅಪಾಯವಿತ್ತು.. ಆದ್ರೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ..

ಎರಡು ವಾಹನಗಳಲ್ಲಿ ಬಂದಿದ್ದ ಅಗ್ನಿಶಾಮಕ ಸಿಬ್ಬಂದಿ ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಚಾರಣೆ ನಡೆಸಿದರು.. ಕೊನೆಗೂ ಬೆಂಕಿ ಹತೋಟಿಗೆ ತಂದಿದ್ದಾರೆ.. ಕಟ್ಟಡದ ಒಳಗೆ ಸುಮಾರು 60 ಸಿಬ್ಬಂದಿ ಇದ್ದರು.. ಎಲ್ಲರೂ ಕೂಡಾ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.. ಅಗ್ನಿಶಾಮಕ ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ಬಹುಬೇಗ ಕಾರ್ಯಾಚರಣೆ ನಡೆಸಿದ್ದರಿಂದ ಬೆಂಕಿ ನಂದಿಸಲಾಗಿದೆ..

ಕಟ್ಟಡದಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಆರ್ಯವೇದ ಔಷಧಿಗಳು ಬೆಂಕಿಗೆ ಆಹುತಿಯಾಗಿವೆ.. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಈ ಬೆಂಕಿ ಅನಾಹುತ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; ಹೋಟೆಲ್‌ ಕೋಣೆ, ಆರು ಯುವಕರು, ಒಂದೇ ಹುಡುಗಿ; ಅಲ್ಲಿ ನಡೆದಿದ್ದೇನು..?

 

Share Post