National

ಅಸ್ಸಾಂ ಹಾಗೂ ಲಡಾಖ್‌ನಲ್ಲಿ ಕಂಪಿಸಿದ ಭೂಮಿ

ದಿಸ್ಪುರ್; ಅಸ್ಸಾಂನಲ್ಲಿ ಇಂದು ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. 10.05ಕ್ಕೆ ಭೂಮಿ ಕಂಪಿಸಿದ್ದು, ರಿಕ್ಟರ್‌ ಮಾಪಕದಲ್ಲಿ 3.7ರಷ್ಟು ತೀವ್ರತೆ ದಾಖಲಾಗಿದೆ. ತೇಜ್‍ಪುರ್‌ದಿಂದ ಸುಮಾರು 39 ಕಿ.ಮೀ ದೂರದಲ್ಲಿ ಭೂಕಂಪ ಆಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಕೇಂದ್ರಾಡಳಿತ ಪ್ರದೇಶ ಲಡಾಖ್‍ನಲ್ಲೂ ಭೂಮಿ ಕಂಪಿಸಿದೆ. ಇಲ್ಲಿ 3.9ರಷ್ಟು ತೀವ್ರತೆ ದಾಖಲಾಗಿದೆ. ಲಡಾಖ್‌ನಲ್ಲಿ ಬೆಳಗ್ಗೆ 10:23ಕ್ಕೆ ಭೂಮಿ ಕಂಪಿಸಿದೆ. 10 ಕಿ.ಮೀ. ಆಳದಲ್ಲಿ ಭೂಮಿಯ ಕಂಪನವಾಗಿದೆ ಎಂದು ತಿಳಿದುಬಂದಿದೆ. ನಿನ್ನೆ ಕೂಡಾ ಅಸ್ಸಾಂನಲ್ಲಿ ಭೂಮಿ ಕಂಪಿಸಿತ್ತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿದ್ದರ ಬಗ್ಗೆ ವರದಿಯಾಗಿಲ್ಲ.

Share Post