EconomyLifestyle

Money Plan; 21 ವರ್ಷದಲ್ಲಿ 70 ಲಕ್ಷ ಗಳಿಸುವ ಅವಕಾಶ!

ಬೆಂಗಳೂರು; ತುಂಬಾ ಜನ ಹಣ ಗಳಿಕೆ ಮಾಡುತ್ತಾರೆ.. ಆದ್ರೆ ಅದನ್ನು ಉಳಿಸಿಕೊಳ್ಳೋದಕ್ಕೆ ಅವರ ಕೈಯಲ್ಲಿ ಆಗೋದಿಲ್ಲ.. ಎಷ್ಟೇ ಸಂಪಾದನೆ ಮಾಡಿದರೂ ಅದನ್ನು ಖರ್ಚು ಮಾಡಿ ಬಿಡುತ್ತಾರೆ.. ಕೆಲವರು ಉಳಿತಾಯ ಮಾಡುತ್ತಾರಾದರೂ ಸರಿಯಾದ ಕಡೆ ಅದನ್ನು ಉಳಿತಾಯ ಮಾಡದೇ ಎಡವುತ್ತಾರೆ.. ಹಣ ಉಳಿತಾಯ ಮಾಡೋದಕ್ಕೆ ಕೇಂದ್ರ ಸರ್ಕಾರ, ಬ್ಯಾಂಕ್‌ಗಳು, ಪೋಸ್ಟ್‌ಫೀಸ್‌ಗಳಲ್ಲಿ ಹಲವಾರು ಯೋಜನೆಗಳಿವೆ.. ಅದ್ರಲ್ಲಿ ಸುಕನ್ಯ ಸಮೃದ್ಧಿ ಯೋಜನೆ ಕೂಡಾ ಒಂದು.. ಹೆಣ್ಣು ಮಕ್ಕಳಿಗಾಗಿ ಉಳಿತಾಯ ಮಾಡುವಂತಹ ಯೋಜನೆ ಇದು.. ಇದರಲ್ಲಿ ಅತಿಹೆಚ್ಚು ಬಡ್ಡಿ ಸಿಗುತ್ತದೆ.. ಈ ಯೋಜನೆಯಲ್ಲಿ ವರ್ಷಕ್ಕೆ ಕನಿಷ್ಠ 250 ರೂಪಾಯಿಯಿಂದ 1.5 ಲಕ್ಷ ರೂಪಾಯಿಯವರೆಗೂ ಇಲ್ಲಿ ಹೂಡಿಕೆ ಮಾಡಬಹುದು..

ಇದನ್ನೂ ಓದಿ; Pistol lady; ಪಾತ್ರೆಯಲ್ಲ, ಪಿಸ್ತೂಲ್‌ ತೊಳೆಯುತ್ತಾಳೆ ಈ ಮಹಿಳೆ!

ಈ ಯೋಜನೆಯಲ್ಲಿ 15 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಹೆಣ್ಣು ಮಗುವಿನ ವಯಸ್ಸು 21 ವರ್ಷ ಆದ ಮೇಲೆ ಈ ಹಣವನ್ನು ಪಡೆದುಕೊಳ್ಳಬಹುದು.. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವ ಮೂಲಕ 70 ಲಕ್ಷ ರೂಪಾಯಿವರೆಗೂ ಪಡೆಯಬಹುದು. ಹಾಗಾದರೆ 70 ಲಕ್ಷ ರೂಪಾಯಿ ಪಡೆಯಬೇಕಾದರೆ ತಿಂಗಳಿಗೆ ಎಷ್ಟು ಹೂಡಿಕೆ ಮಾಡಬೇಕು ಅನ್ನೋದನ್ನು ನೋಡೋಣ.. ನಿಮ್ಮ ಮಗಳು ಹುಟ್ಟಿದ ದಿನದಿಂದ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪ್ರಾರಂಭಿಸಿ. ಅಂದಿನಿಂದಲೇ ನೀವು ವರ್ಷಕ್ಕೆ 1.5 ಲಕ್ಷ ರೂಪಾಯಿ ಠೇವಣಿ ಇಡುತ್ತೀರಿ ಎಂದಿಟ್ಟುಕೊಳ್ಳೋಣ. ಅಂದ್ರೆ ತಿಂಗಳಿಗೆ 12500 ರೂಪಾಯಿ. ನೀವು ಹೀಗೆ 15 ವರ್ಷಗಳವರೆಗೆ ಈ ರೀತಿ ಹೂಡಿಕೆ ಮಾಡಿದರೆ, ನೀವು ಒಟ್ಟು 22,50,000 ರೂಪಾಯಿ ಹೂಡಿಕೆ ಮಾಡಿರುತ್ತೀರಿ.. ಈ ಯೋಜನೆಗೆ ಸದ್ಯ ಶೇಕಡಾ 8.2ರಷ್ಟು ಬಡ್ಡಿ ಇದೆ. 21 ವರ್ಷಗಳ ನಂತರ 46,77,578 ಬಡ್ಡಿ ಸಿಗುತ್ತದೆ.

ಇದನ್ನೂ ಓದಿ; Headache; ಕ್ಷಣಗಳಲ್ಲಿ ತಲೆನೋವು ಕಡಿಮೆಯಾಗಬೇಕಾ..?

ಹೀಗಾಗಿ ನಿಮ್ಮ ಮಗಳಿಗೆ 21 ವರ್ಷವಾದಾಗ 69 ಲಕ್ಷ 27 ಸಾವಿರದ 578 ರೂಪಾಯಿ ಬರುತ್ತದೆ.. 2024ರ ಆಗಸ್ಟ್‌ನಲ್ಲಿ ಈ ಯೋಜನೆಗೆ ಸೇರಿದರೆ 2045 ರ ವೇಳೆಗೆ ನೀವು 70 ಲಕ್ಷ ರೂಪಾಯಿ ಪಡೆಯುತ್ತೀರಿ. ಈ ಯೋಜನೆಯಲ್ಲಿ ಹೂಡಿಕೆ ಮಾಡುವವರು 1961 ರ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಉಳಿಸುವ ಅವಕಾಶವನ್ನು ಸಹ ಪಡೆಯುತ್ತಾರೆ.

Share Post