Crime

ಖಾಕಿ ಧರಿಸಿ ಪೋಸ್‌ ಕೊಟ್ಟ ಮಹಿಳಾ ಅಧಿಕಾರಿ: ಸೋಶಿಯಲ್‌ ಮೀಡಿಯಾದಲ್ಲಿ ವೈರಲ್

ಕೋಯಿಕ್ಕೋಡ್​: ‌ ಸಮವಸ್ತ್ರ ಧರಿಸಿ ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು ತಮ್ಮ ಪ್ರೀ ವೆಡ್ಡಿಂಗ್‌ ಫೋಟೋಶೂಟ್‌ಗೆ ಪೋಸ್‌ ನೀಡಿದ್ದಾರೆ. ಇದೀಗ ಆ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಟೀಕೆಗಳಿಗೆ ಗುರಿಯಾಗಿದೆ.

ʻಸೇವ್​ ದಿ ಡೇಟ್​ʼ ಎಂಬ ಟ್ಯಾಗ್​ಲೈನ್​ ಅಡಿಯಲ್ಲಿ ಕೋಯಿಕ್ಕೋಡ್​ ನಗರದ ಮಹಿಳಾ ಸಬ್​ಇನ್ಸ್​ಪೆಕ್ಟರ್ ಯೂನಿಫಾರ್ಮ್‌ ಧರಿಸಿಯೇ ತಮ್ಮ ಭಾವಿ ಪತಿಯೊಂದಿಗೆ ಫೋಟೋಗೆ ಪೋಸ್‌ ನೀಡಿದ್ದು ಪೊಲೀಸ್‌ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. 2015 ರಲ್ಲಿ ಕೇರಳ ಡಿಜಿಪಿ ಆಗಿದ್ದ ಟಿ.ಪಿ.ಸೆನ್‌ಕುಮಾರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಮವಸ್ತ್ರವನ್ನು ಧರಿಸಿದ ಫೋಟೋಗಳನ್ನು ಪೋಸ್ಟ್ ಮಾಡಂತೆ ಆದೇಶವನ್ನು ಹೊರಡಿಸಿದ್ರು, ಜೊತೆಗೆ ಜಾಲತಾಣಗಳಲ್ಲಿ ಸಂವಹನ ನಡೆಸುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದ್ದರು. ಇದೀಗ ಆದೇಶವನ್ನು ಉಲ್ಲಂಘಿಸಿ ಮಹಿಳಾ ಪೊಲೀಸ್​ ಅಧಿಕಾರಿ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದು, ಕಠಿಣ ಕ್ರಮ ಎದರಿಸುವ ಸಾಧ್ಯತೆ ಇದೆ. 

Share Post