Bengaluru

ಪೊಲೀಸ್‌ ಅಧಿಕಾರಿ ರವಿಕಾಂತೇಗೌಡ ಮನೆಕೆಲಸದಾಕೆ ನಾಪತ್ತೆ..!

ಬೆಂಗಳೂರು: ಬೆಂಗಳೂರು ನಗರ ಪೊಲೀಸ್‌ ಸಂಚಾರ ವಿಭಾಗದ ಜಂಟಿ ಕಮಿಷನರ್ ರವಿಕಾಂತೇಗೌಡ ಅವರ ಮನೆಕೆಲಸದಾಕೆ ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಸಂಜಯ್‌ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.


ನಾಪತ್ತೆಯಾದ ಮಹಿಳೆ ಬಳ್ಳಾರಿ ಮೂಲದವರು. ಕೆಲ ವರ್ಷಗಳಿಂದ ರವಿಕಾಂತೇಗೌಡ ಅವರ ಮನೆಯಲ್ಲಿ ಕೆಲಸಕ್ಕಿದ್ದರು. ಸೋಮವಾರ ಬೆಳಗ್ಗೆ ರವಿಕಾಂತೇಗೌಡ ಅವರ ಮನೆಯಿಂದ ಹೊರಹೋದವರು ಮತ್ತೆ ವಾಪಸ್‌ ಬಂದಿಲ್ಲ ಎಂದು ಗೊತ್ತಾಗಿದೆ. ಹೀಗಾಗಿ, ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಲಾಗಿದೆ. ಮಹಿಳೆಯ ಬಳ್ಳಾರಿ ವಿಳಾಸ ಹಾಗೂ ಆಕೆಯ ಸಂಬಂಧಿಕರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ಸದ್ಯ ಮಹಿಳೆ ಎಲ್ಲಿದ್ದಾರೆ ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಆಕೆಯನ್ನು ನಗರಕ್ಕೆ ಕರೆತಂದು ಪೊಲೀಸರು ಆಕೆಯಿಂದ ಹೇಳಿಕೆ ಪಡೆಯಲಿದ್ದಾರೆ.

Share Post