CinemaCrimeNational

200 ಕೋಟಿ ವಂಚನೆ ಪ್ರಕರಣ; ನಟಿ ಜಾಕ್ವೆಲಿನ್‌ಗೆ ಸಮನ್ಸ್‌

ನವ ದೆಹಲಿ; 200 ಕೋಟಿ ರೂಪಾಯಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಸುಕೇಶ್​ ಚಂದ್ರಶೇಖರ್​ ಜೊತೆ ಗುರುತಿಸಿಕೊಂಡಿದ್ದ ನಟಿ ಜಾಕ್ವೆಲಿನ್​ ಫರ್ನಾಂಡಿಸ್‌ಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಸೆಪ್ಟೆಂಬರ್‌ 26 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೋರ್ಟ್‌ ಸೂಚಿಸಿದೆ. ಪ್ರಕರಣದಲ್ಲಿ ಇತ್ತೀಚೆಗೆ ಸಲ್ಲಿಸಲಾಗಿದ್ದ ಪೂರಕ ಆರೋಪ ಪಟ್ಟಿಯನ್ನೂ ಸಹ ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.

   ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇತ್ತೀಚೆಗೆ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಆರೋಪಿ ಎಂದು ಕೋರ್ಟ್‌ಗೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿತ್ತು. ಈ ಪ್ರಕರಣ ಸಂಬಂಧ ಇಡಿ ಸಲ್ಲಿಸಿದ್ದ ಮೊದಲ ಚಾರ್ಜ್‌ಶೀಟ್‌ನಲ್ಲಿ ಸುಕೇಶ್ ಚಂದ್ರಶೇಖರ್ ವಂಚಿಸಿದ್ದ ಹಣವನ್ನು ಹೇಗೆ ಬಳಸಿದ್ದಾನೆ ಎಂದು ವಿವರಿಸಲಾಗಿದೆ. ಪೂರಕ ಆರೋಪಪಟ್ಟಿಯಲ್ಲಿ, ಈತ ವಂಚಿಸಿದ ಮೊತ್ತದಿಂದ 5 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಉಡುಗೊರೆಗಳನ್ನು ಜಾಕ್ವೆಲಿನ್‌ ಫರ್ನಾಂಡೀಸ್​ಗೆ ನೀಡಿದ್ದಾನೆ. ಅಪರಾಧದ ಆದಾಯದಿಂದಲೇ ಉಡುಗೊರೆಗಳನ್ನು ಖರೀದಿಸಲಾಗಿದೆ ಎಂಬ ವಿಚಾರ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ತಿಳಿದಿತ್ತು ಎಂದು ಇಡಿ ಕೋರ್ಟ್‌ಗೆ ಹೇಳಿದೆ.

Share Post