CrimeNational

ಅದಕ್ಕೆ ಒಲ್ಲೆ ಪ್ರಿಯತಮ!; ಚಾಕುವಿನಿಂದ ದಾಳಿ ಮಾಡಿದ ಪ್ರಿಯತಮೆ!

ಮುಂಬೈ(Mumbai); ಪ್ರೀತಿಸೋ ಅಷ್ಟು ದಿನ ಪ್ರೀತಿಸಿ ಈಗ ಪ್ರಿಯತಮ ಮದುವೆಗೆ ಒಲ್ಲೆ ಎಂದಿದ್ದಾನೆ.. ಇದರಿಂದ ಆಕ್ರೋಶಗೊಂಡ ಯುವತಿ, ಪ್ರಿಯಕರ ಖಾಸಗಿ ಅಂಗದ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ.. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ಸಿಟಿಯಲ್ಲಿ ಈ ಘಟನೆ ನಡೆದಿದೆ.. ಪದ್ಮಾನಗರಕ್ಕೆ ಪ್ರಿಯಕರನನ್ನು ಕರೆಸಿಕೊಂಡ ಪ್ರಿಯತಮೆ ತನ್ನ ಪ್ರಿಯತಮನ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾಳೆ.. ಖಾಸಗಿ ಅಂಗವನ್ನು ಕತ್ತರಿಸಲು ಪ್ರಯತ್ನಿಸಿದ್ದಾಳೆ..

ಇದನ್ನೂ ಓದಿ; ವೈದ್ಯರು, ನರ್ಸ್‌ಗಳಿಗೆ ಕಚ್ಚಿ ರಂಪಾಟ ಮಾಡಿದ ವ್ಯಕ್ತಿ!; ಆಸ್ಪತ್ರೆಯಲ್ಲಿ ನಡೆದಿದ್ದೇನು..?

ಭಿವಂಡಿ ಸಿಟಿಯಲ್ಲಿ ವಾಸವಿರುವವ 26 ವರ್ಷದ ಯುವತಿ 31 ವರ್ಷದ ಯುವಕನ್ನು ಪ್ರೀತಿ ಮಾಡುತ್ತಿದ್ದಳು.. ಹಲವು ವರ್ಷಗಳಿಂದ ಪ್ರೀತಿ ಮುಂದುವರೆದಿತ್ತು.. ಇಬ್ಬರೂ ಅಲ್ಲಿ ಇಲ್ಲಿ ಸುತ್ತಾಡಿದ್ದರು.. ಆದ್ರೆ ಮದುವೆ ವಿಚಾರ ಎತ್ತಾಗ ಮಾತ್ರ ಪ್ರಿಯತಮ ಜಾರಿ ಕೊಳ್ಳುತ್ತಿದ್ದ.. ಕೊನೆಗೆ ಯುವತಿ ಹಠ ಮಾಡಿ ಮದುವೆಯಾಗಲೇಬೇಕು ಎಂದಿದ್ದಾಳೆ.. ಆಗ ಆತ ಮದುವೆ ಆಗೋಕೆ ಆಗಲ್ಲ ಎಂದು ಗಟ್ಟಿಯಾಗಿ ಹೇಳಿಬಿಟ್ಟಿದ್ದಾನೆ.. ಇದರಿಂದ ಆಕ್ರೋಶಗೊಂಡಿದ್ದ ಯುವತಿ, ಪ್ರಿಯಕರನಿಗೆ ಬುದ್ಧಿ ಕಲಿಸಲು ಪ್ಲ್ಯಾನ್‌ ಮಾಡಿದ್ದಾಳೆ..

ಇದನ್ನೂ ಓದಿ; ನಾಲ್ವರು ವಿದ್ಯಾರ್ಥಿಗಳನ್ನು ಅರೆಬೆತ್ತಲೆ ಮಾಡಿ ಹಲ್ಲೆ!

ಎಂದಿನಂತೆ ಪ್ರೀತಿಯಿಂದ ಮಾತಾಡಿಸಿ ತನ್ನ ಮನೆಗೆ ಪ್ರಿಯಕರನನ್ನು ಕರೆಸಿಕೊಂಡ ಆಕೆ ಚಾಕುವಿನಿಂದ ದಾಳಿ ಮಾಡಿದ್ದಾಳೆ.. ನಂತರ ಖಾಸಗಿ ಅಂಗದ ಮೇಲೂ ಚಾಕುವಿನಿಂದ ದಾಳಿ ಮಾಡಿದ್ದಾಳೆ.. ಇದರಿಂದ ಪ್ರಿಯಕರ ತೀವ್ರವಾಗಿ ಗಾಯಗೊಂಡಿದ್ದಾನೆ.. ಆಕೆಯಿಂದ ತಪ್ಪಿಸಿಕೊಂಡ ಆತ ಸಮೀಪದ ಆಸ್ಪತ್ರೆಗೆ ದಾಖಲಾಗಿದ್ದಾನೆ.. ಪೊಲೀಸರಿಗೂ ಮಾಹಿತಿ ನೀಡಿ ಕೇಸ್‌ ದಾಖಲು ಮಾಡಿದ್ದಾನೆ.

ಇದನ್ನೂ ಓದಿ; ವೈದ್ಯಕೀಯ ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿದ ಯುವಕ!

Share Post