BengaluruCrime

ವೈದ್ಯರು, ನರ್ಸ್‌ಗಳಿಗೆ ಕಚ್ಚಿ ರಂಪಾಟ ಮಾಡಿದ ವ್ಯಕ್ತಿ!; ಆಸ್ಪತ್ರೆಯಲ್ಲಿ ನಡೆದಿದ್ದೇನು..?

ಬೆಂಗಳೂರು; ಬೆಂಗಳೂರಿನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ರಂಪಾಟ ಮಾಡಿದ್ದಾನೆ.. ಸಿಕ್ಕ ಸಿಕ್ಕ ವೈದ್ಯರು, ನರ್ಸ್‌ಗಳ ಮೇಲೆ ದಾಳಿ ಮಾಡಿದ್ದು, ಕಚ್ಚಿ ಗಾಯಗೊಳಿಸಿದ್ದಾನೆ.. ಎಲೆಕ್ಟ್ರಾನಿಕ್‌ ಸಿಟಿ ಬಳಿಯ ಬೆಟ್ಟದಾಸನಪುರದಲ್ಲಿರುವ ಸಾಯಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ..

ಇದನ್ನೂ ಓದಿ; ಸಿದ್ದರಾಮಯ್ಯ ಮೆಗಾಪ್ಲ್ಯಾನ್‌ ರೆಡಿ; ಶುಕ್ರವಾರದ ರಾಜಕೀಯ ಭಾರೀ ಕುತೂಹಲ!

ವ್ಯಕ್ತಿಯೊಬ್ಬ ರಸ್ತೆಯಲ್ಲಿ ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡುತ್ತಿದ್ದ.. ಹೀಗಾಗಿ ಸಾರ್ವಜನಿಕರು ಆತನನ್ನು ಹಿಡಿದು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.. ಆದ್ರೆ ಅಲ್ಲೂ ಕೂಡಾ ಆತ ವೈದ್ಯರ ಮೇಲೆ ದಾಳಿ ಮಾಡಿದ್ದಾನೆ.. ಸಾಲದು ಎಂಬಂತೆ ಕಚ್ಚಲು ಹೋಗಿದ್ದಾರೆ.. ಹಿಡಿಯಲು ಬಂದ ನರ್ಸ್‌ಗಳ ಮೇಲೂ ದಾಳಿ ಮಾಡಿದ್ದಾನೆ.. ಇದರಿಂದಾಗಿ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ; ಬೆತ್ತಲೆಯಾಗಿ ಬಂದ ಮಹಿಳೆಯಿಂದ ಯುವಕನ ಮೇಲೆ ಲೈಂಗಿಕ ದೌರ್ಜನ್ಯ!

ಆರೋಪಿ ಡ್ರಗ್ಸ್‌ ಸೇವಿಸಿ, ಅದರ ನಶೆಯಲ್ಲಿ ಹೀಗೆಲ್ಲಾ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.. ಈ ಹಿನ್ನೆಲೆಯಲ್ಲಿ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.. ಆತ ಡ್ರಗ್ಸ್‌ ಸೇವಿಸಿದ್ದಾನೆಯೇ..? ಆತ ಈ ರೀತಿ ಆಡಲು ಡ್ರಗ್ಸ್‌ ಕಾರಣವೇ..? ಎಂಬುದನ್ನು ಪರೀಕ್ಷೆ ಮಾಡಿಸುತ್ತಿದ್ದಾರೆ.. ಆತ ಡ್ರಗ್ಸ್‌ ಸೇವಿಸಿರುವುದು ಕನ್ಫರ್ಮ್‌ ಆದರೆ ಆತನಿಗೆ ಡ್ರಗ್ಸ್‌ ಸಪ್ಲೈ ಮಾಡಿದ್ದು ಯಾರು..? ಎಲ್ಲೆಲ್ಲಿ ಡ್ರಗ್ಸ್‌ ಸಿಗುತ್ತೆ..? ಎಂಬುದರ ಮಾಹಿತಿ ಪಡೆದು ಡ್ರಗ್ಸ್‌ ಪೆಡ್ಲರ್‌ಗಳಿಗೆ ಬಲೆ ಬೀಸಲು ಪೊಲೀಸರು ಸಜ್ಜಾಗುತ್ತಿದ್ದಾರೆ..

ಇದನ್ನೂ ಓದಿ; ಮೋದಿಗೆ 75 ವರ್ಷವಾಗ್ತಿದೆ; ಬದಲಾಗ್ತಾರಾ ಪ್ರಧಾನಿ..?

Share Post