ಆಟಿಕೆ ಎಂದು ಹಾವನ್ನು ಕಚ್ಚಿ ಸಾಯಿಸಿದ ಪುಟ್ಟ ಮಗು!
ಗಯಾ(GAYA); ಮನೆಯಲ್ಲಿ ಆಟವಾಡುತ್ತಿದ್ದ ಮಗು ಅಲ್ಲಿಗೆ ಬಂದ ಹಾವನ್ನು ಆಟಿಕೆ ಎಂದುಕೊಂಡು ಕಚ್ಚಿ ಸಾಯಿಸಿದೆ. ಬಿಹಾರದ ಗಯಾದಲ್ಲಿ ಈ ಘಟನೆ ನಡೆದಿದೆ.. ಇನ್ನೂ ವರ್ಷವೂ ತುಂಬಿರದ ಮಗು ಹಾವನ್ನು ಕಚ್ಚಿ ಸಾಯಿಸಿದ್ದು, ಅದೃಷ್ಟವಶಾತ್ ಆ ಮಗುವಿಗೆ ಏನೂ ಆಗಿಲ್ಲ.
ಇದನ್ನೂ ಓದಿ; ಅದಕ್ಕೆ ಒಲ್ಲೆ ಪ್ರಿಯತಮ!; ಚಾಕುವಿನಿಂದ ದಾಳಿ ಮಾಡಿದ ಪ್ರಿಯತಮೆ!
ಮನೆಯಲ್ಲಿ ಮಗುವನ್ನು ಆಟ ಆಡಲು ಬಿಟ್ಟು ಪೋಷಕರು ಬೇರೆ ಕಡೆ ಕೆಲಸ ಮಾಡುತ್ತಿದ್ದರು.. ಈ ವೇಳೆ ಹಾವು ಅಲ್ಲಿಗೆ ಬಂದಿದೆ.. ಆಗ ಮಗ ಆ ಹಾವನ್ನು ಹಿಡಿದು ಹಚ್ಚಿ ಸಾಯಿಸಿದೆ.. ಇಷ್ಟೇ ಮಗು ಮಾಡಿದರೂ ಹಾವು ಮಗುವನ್ನು ಏನೂ ಮಾಡದೇ ಇರೋದು ಅಚ್ಚರಿಗೆ ಕಾರಣವಾಗಿದೆ.. ಮಗುವಿನ ಬಾಯಿಂದ ರಕ್ತ ಬರುತ್ತಿದ್ದುದನ್ನು ನೋಡಿ ತಾಯಿ ಆತಂಕಗೊಂಡಿದ್ದಾಳೆ.. ಪಕ್ಕದಲ್ಲಿ ಹಾವು ಬಿದ್ದಿದ್ದನ್ನು ನೋಡಿ ಮತ್ತಷ್ಟು ಆತಂಕ ಹೆಚ್ಚಾಗಿದೆ.. ಕೂಡಲೇ ತಾಯಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ.. ಪರೀಕ್ಷೆ ಮಾಡಿದ ವೈದ್ಯರು ಮಗು ಆರೋಗ್ಯವಾಗಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ..
ಇದನ್ನೂ ಓದಿ; ವೈದ್ಯರು, ನರ್ಸ್‌ಗಳಿಗೆ ಕಚ್ಚಿ ರಂಪಾಟ ಮಾಡಿದ ವ್ಯಕ್ತಿ!; ಆಸ್ಪತ್ರೆಯಲ್ಲಿ ನಡೆದಿದ್ದೇನು..?
ಗಯಾದ ಫತೇಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಜಮುಹರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.. ಮೂರು ಅಡಿ ಉದ್ದದ ಹಾವಾಗಿದ್ದು, ಅದು ವಿಷಕಾರಿ ಹಾವಲ್ಲ ಎಂದು ಗೊತ್ತಾಗಿದೆ.. ಈ ಕಾರಣದಿಂದಲೇ ಮಗು ಉಳಿದಿದೆ ಎಂದು ವೈದ್ಯರು ಹೇಳಿದ್ದಾರೆ.. ಮಳೆಗಾಲವಾಗಿರುವುದರಿಂದ ಹಾವುಗಳು ಮನೆಗಳೊಳಗೆ ದಾಳಿ ಇಡುತ್ತಿರುತ್ತವೆ.. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು..