ವೈದ್ಯಕೀಯ ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿದ ಯುವಕ!
ಕಲಬುರಗಿ; ಪಶ್ಚಿಮ ಬಂಗಾಳದಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ರೇಪ್ ಅಂಡ್ ಮರ್ಡರ್ ಕೇಸ್ ದೇಶಾದ್ಯಂತ ಚರ್ಚೆಯನ್ನು ಹುಟ್ಟು ಹಾಕಿದೆ.. ಹೀಗಿರುವಾಗಲೇ ದೇಶದ ಹಲವೆಡೆ ಇಂತಹ ಕಾಮುಕ ಕ್ರಿಮಿಗಳ ಹುಚ್ಚಾಟ ಮುಂದುವರೆದೇ ಇದೆ.. ಕಲಬುರಗಿಯ ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದ ಯುವಕನೊಬ್ಬ ಒಪಿಡಿಯಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿನಿಯರಿಗೆ ತನ್ನ ಮರ್ಮಾಂಗ ತೋರಿಸಿ ವಿಕೃತಿ ಮೆರೆದಿದ್ದಾನೆ..
ಇದನ್ನೂ ಓದಿ; ಸಿದ್ದರಾಮಯ್ಯ ಮೆಗಾಪ್ಲ್ಯಾನ್ ರೆಡಿ; ಶುಕ್ರವಾರದ ರಾಜಕೀಯ ಭಾರೀ ಕುತೂಹಲ!
ಆಗಸ್ಟ್ 14ರಂದೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.. ಚಿಕಿತ್ಸೆಗೆಂದು ಬಂದಿದ್ದ ಯುವಕ, ಹೊರರೋಗಿಯಾಗಿ ಒಪಿಡಿ ಚೀಟಿ ಪಡೆದುಕೊಂಡಿದ್ದಾನೆ.. ನಂತರ ಆತ ಒಪಿಡಿಗೆ ಎಂಟ್ರಿ ಕೊಟ್ಟಿದ್ದಾನೆ.. ಅಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯರು ಇಂಟರರ್ನ್‌ಶಿಪ್ ಮಾಡುತ್ತಿದ್ದರು.. ಅಲ್ಲಿ ಚಿಕಿತ್ಸೆ ಪಡೆಯುವ ರೀತಿ ವರ್ತಿಸಿದ ಆರೋಪಿ, ವಿದ್ಯಾರ್ಥಿನಿಯರ ಮುಂದೆ ಕೂತು ಮರ್ಮಾಂಗ ತೋರಿಸಿದ್ದಾನೆ ಎಂದು ಹೇಳಲಾಗಿದೆ..
ಇದನ್ನೂ ಓದಿ; ವೈದ್ಯರು, ನರ್ಸ್‌ಗಳಿಗೆ ಕಚ್ಚಿ ರಂಪಾಟ ಮಾಡಿದ ವ್ಯಕ್ತಿ!; ಆಸ್ಪತ್ರೆಯಲ್ಲಿ ನಡೆದಿದ್ದೇನು..?
ಇದಿಷ್ಟೇ ಆಗಿದ್ದರೆ ತಪ್ಪಾಗಿ ಆಗಿರಬಹುದು ಎಂದು ಹೇಳಬಹುದಿತ್ತು.. ಆದ್ರೆ ವಿದ್ಯಾರ್ಥಿನಿಯರು ಹಾಸ್ಟೆಲ್‌ನಿಂದ ಆಸ್ಪತ್ರೆಗೆ ಬರುವಾಗಲೂ ಹಿಂಬಾಲಿಸಿದ್ದಾನೆ.. ಕಿರುಕುಳ ನೀಡಲೆಂದೇ ಅಲ್ಲಿಗೆ ಬಂದಿದ್ದಾನೆ ಎಂದು ಆರೋಪಿಸಲಾಗಿದೆ.. ಇಎಸ್‌ಐ ಆಸ್ಪತ್ರೆ ಡೀನ್ ಗೆ ವಿದ್ಯಾರ್ಥಿನಿಯರು ಮಾಹಿತಿ ನೀಡಿದ್ದು, ಗುಲ್ಬರ್ಗಾ ವಿವಿ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.. ಆ ಅಪರಿಚಿತ ಯುವಕನಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ..