ಶಾಸಕನ ಬಾಡಿಗಾರ್ಡ್ ರೌಡಿ ದರ್ಬಾರ್!; ರಾಡ್‌ನಿಂದ ವ್ಯಕ್ತಿ ಮೇಲೆ ಹಲ್ಲೆ!
ಮುಂಬೈ; ಶಾಸಕನ ಬಾಡಿಗಾರ್ಡ್ ಒಬ್ಬ ರೌಡಿ ದರ್ಬಾರ್ ತೋರಿಸಿದ್ದಾನೆ.. ವ್ಯಕ್ತಿಯೊಬ್ಬ ತನ್ನ ಕುಟುಂಬದ ಸದಸ್ಯರ ಜೊತೆ ಕಾರಿನಲ್ಲಿ ಹೋಗುತ್ತಿದ್ದಾಗ ಶಾಸಕನ ಬಾಡಿಗಾರ್ಡ್ ಅಡ್ಡ ಹಾಕಿದ್ದಾನೆ.. ಹೆಂಡತಿ, ಮಕ್ಕಳು ಕಿರುಚಾಡುತ್ತಿದ್ದರೂ ಲೆಕ್ಕ ಮಾಡದೇ ಕಾರಿನಲ್ಲಿದ್ದ ವ್ಯಕ್ತಿ ಮೇಲೆ ರಾಡ್‌ನಿಂದ ಹಲ್ಲೆ ಮಾಡಿದ್ದಾನೆ.. ಮುಂಬೈನ ನೆರುಲ್ ಬಳಿ ಹಾಡಹಗಲೇ ಈ ದಾಳಿ ನಡೆದಿದೆ..
ಶಿವಸೇನೆ ಶಿಂಧೆ ಬಣದ ಶಾಸಕ ಮಹೇಂದ್ರ ತೋರ್ವೇ ಅವರ ಬಾಡಿಗಾರ್ಡ್ ಶಿವಾಜಿ ಸೊನವಾಲೆ ಎಂಬಾತನೇ ಈ ಕೃತ್ಯ ಎಸಗಿರುವಾತ.. ಈ ದಾಳಿಯ ದೃಶ್ಯವನ್ನು ಶಿವಸೇನೆ ಉದ್ಧವ್ ಠಾಕ್ರೆ ಬಣದವರು ಚಿತ್ರೀಕರಣ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಕೃತ್ಯದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.. ಹಲ್ಲೆಗೊಳಗಾದ ವ್ಯಕ್ತಿ ಆರೋಪಿಗೆ ಪರಿಚಯಸ್ಥನೇ ಎಂದು ತಿಳಿದುಬಂದಿದೆ.. ಕಾರಿನಲ್ಲಿದ್ದ ಮಹಿಳೆ ಹಾಗೂ ಮಕ್ಕಳು ಚೀರಾಟ ನಡೆಸಿ ಅಂಗಲಾಚಿದರೂ ಕೂಡಾ ಬಿಡದೆ ವ್ಯಕ್ತಿ ಮೇಲೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಹಗಲಲ್ಲೇ ಅದೂ ಕೂಡಾ ಜನನಿಬಿಡ ರಸ್ತೆಯಲ್ಲೇ ಈ ದಾಳಿ ನಡೆದಿದೆ.. ಅಲ್ಲಿ ಸಾಕಷ್ಟು ಜನ ಇದ್ದರೂ ಕೂಡಾ ಭಯದಿಂದ ಯಾರೂ ಕೂಡಾ ರಕ್ಷಣೆಗೆ ಬಂದಿಲ್ಲ.. ಉದ್ಧವ್ ಠಾಕ್ರೆ ಬಣ ಸೋಷಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಮಾಡುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ.. ಶಾಸಕನ ಬಾಡಿಗಾರ್ಡ್ ಸೊನವಾಲೆನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ..