ಇಂದು ಕೇಂದ್ರ ಬಜೆಟ್; ಬಜೆಟ್‌ಗೆ ಅನುಮೋದನೆ ನೀಡಿದ ಸಂಪುಟ
ನವದೆಹಲಿ; ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ 2023-24ನೇ ಸಾಲಿನ ಬಜೆಟ್‌ಗೆ ಅನುಮೋದನೆ ನೀಡಿದೆ. ಕೆಲವೇ ಕ್ಷಣಗಳಲ್ಲಿ ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.
ಇನ್ನು ಇದಕ್ಕೂ ಮೊದಲು ಬಜೆಟ್ ಭಾಷಣದ ಪ್ರತಿಗಳಿದ್ದ ಚೀಲಗಳನ್ನು ಸಂಸತ್ತಿಗೆ ತರಲಾಯ್ತು. ಈ ವೇಳೆ ಶ್ವಾನಗಳ ಮೂಲಕ ಚೀಲಗಳ ಭದ್ರತಾ ತಪಾಸಣೆ ನಡೆಸಲಾಯ್ತು.