NationalPolitics

ದೆಹಲಿ ಪಾಲಿಕೆಯಲ್ಲಿ ಅಧಿಕಾರ ಹಿಡಿದ ಎಎಪಿ; ಶೆಲ್ಲಿ ಒಬೆರಾಯ್‌ ಮೇಯರ್‌

ನವದೆಹಲಿ; ದೆಹಲಿ ಪಾಲಿಕೆಯಲ್ಲಿ ಎಎಪಿ ಪಕ್ಷ ಅಧಿಕಾರ ಹಿಡಿದೆ. ದೆಹಲಿ ಮಹಾನಗರ ಪಾಲಿಕೆ ಮೇಯರ್ ಆಗಿ ಆಮ್ ಆದ್ಮಿ ಅಭ್ಯರ್ಥಿ ಶೆಲ್ಲಿ ಒಬೆರಾಯ್ ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಶೆಲ್ಲಿ 34 ಮತಗಳ ಅಂತರದಿಂದ ಬಿಜೆಪಿಯ ರೇಖಾ ಗುಪ್ತಾ ಅವರನ್ನು ಸೋಲಿಸಿದ್ದಾರೆ.

ನಾಮನಿರ್ದೇಶಿತ ಸದಸ್ಯರಿಗೆ ಮತದಾನಕ್ಕೆ ಅವಕಾಶ ನೀಡುವ ವಿಚಾರವಾಗಿ ತಿಕ್ಕಾಟ ನಡೆದಿತ್ತು. ಹೀಗಾಗಿ ಮೂರು ಬಾರಿ ಮೇಯರ್‌ ಚುನಾವಣೆ ಮುಂದೂಡಲಾಗಿತ್ತು. ಇದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವಂತೆ ಮಾಡಿತ್ತು. ವಿಚಾರನೆ ನಡೆಸಿದ ಕೋರ್ಟ್‌, ನಾಮನಿರ್ದೇಶಿತ ಸದಸ್ಯರು ಮತದಾನ ಮಾಡುವಂತಿಲ್ಲ ಎಂದು ಸೂಚಿಸಿತ್ತು.

Share Post