ಆಸ್ಪತ್ರೆಯಲ್ಲೇ ರೇಪ್ ಮಾಡಲು ಯತ್ನ!; ವೈದ್ಯನ ಮರ್ಮಾಂಗ ಕತ್ತರಿಸಿದ ನರ್ಸ್!
ಬಿಹಾರ; ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ರೇಪ್ ಹಾಗೂ ಮರ್ಡರ್ ಕೇಸ್ ಇಡೀ ದೇಶದಲ್ಲೇ ಸಂಚಲನ ಮೂಡಿಸಿದೆ.. ಹೀಗಿರುವಾಗಲೇ ಬಿಹಾರದ ಒಂದು ಆಸ್ಪತ್ರೆಯಲ್ಲಿ ನರ್ಸ್ ಒಬ್ಬರ ಮೇಲೆ ಅತ್ಯಾಚಾರ ಯತ್ನ ನಡೆದಿದೆ.. ಖಾಸಗಿ ಆಸ್ಪತ್ರೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಲಾಗಿದ್ದು, ಈ ವೇಳೆ ಕಾಮುಕರಿಂದ ತಪ್ಪಿಸಿಕೊಳ್ಳಲು ನರ್ಸ್ ಬ್ಲೇಡ್‌ನಿಂದ ಕಾಮುಕ ವೈದ್ಯನೊಬ್ಬನ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ..
ಬಿಹಾರದ ಸಮಷ್ಟಿಪುರ ಜಿಲ್ಲೆಯ ಮುಸ್ರಿಘರಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗಾಪುರದ ಆರ್ಬಿಎಸ್ ಹೆಲ್ತ್ ಕೇರ್ ಸೆಂಟರ್ನಲ್ಲಿ ಈ ಘಟನೆ ನಡೆದಿದೆ.. ಬುಧವಾರ ರಾತ್ರಿ ಎಂದಿನಂತೆ ನರ್ಸ್ ತಮ್ಮ ಕೆಲಸ ಮುಗಿಸಿ ಮನೆಗೆ ಹೊರಡುತ್ತಿದ್ದರು.. ಈ ವೇಳೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸಂಜಯ್ ಕುಮಾರ್ ಹಾಗೂ ಇತರ ಇಬ್ಬರು ಕುಡಿದ ಮತ್ತಿನಲ್ಲಿದ್ದರು.. ಇವರು ನರ್ಸ್ ಮೇಲೆ ಎರಗಿದ್ದಾರೆ.. ಅತ್ಯಾಚಾರಕ್ಕೆ ಯತ್ನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ..
ಮೂವರು ಕಾಮುಕರಿಂದ ತಪ್ಪಿಸಿಕೊಳ್ಳಲು ನರ್ಸ್ ಬ್ಲೇಡ್ ಸಹಾಯದಿಂದ ವೈದ್ಯನ ಮರ್ಮಾಂಗವನ್ನು ಸೀಳಿದ್ದಾಳೆ.. ನಂತರ ಅಲ್ಲಿಂದ ಎಸ್ಕೇಪ್ ಆಗಿ ಹೊರಬಂದು ಆಸ್ಪತ್ರೆ ಆವರಣದ ಮೈದಾನದಲ್ಲಿ ಅಡಗಿಕೊಂಡು ಪೊಲೀಸರಿಗೆ ನರ್ಸ್ ಕರೆ ಮಾಡಿದ್ದಾರೆ.. ಪೊಲೀಸರು ಕೂಡಲೇ ಬಂದು ಆಕೆಯನ್ನು ರಕ್ಷಣೆ ಮಾಡಿದ್ದಾರೆ.. ನಂತರ ಮೂವರೂ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.. ಡಾ.ಸಂಜಯ್ ಕುಮಾರ್, ಸುನಿಲ್ ಕುಮಾರ್ ಗುಪ್ತಾ ಹಾಗೂ ಅವಧೇಶ್ ಕುಮಾರ್ ಎಂಬುವವರೇ ಬಂಧಿತ ಕಾಮುಕರು.
ಮೊದಲೇ ಪ್ಲ್ಯಾನ್ ಮಾಡಿದ್ದ ಕಾಮುಕರು ನರ್ಸ್ ಹೊರಹೋಗುವುದಕ್ಕೆ ಬಿಡದೇ ಮುಂಬಾಗಿಲನ್ನು ಲಾಕ್ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.. ಜೊತೆಗೆ ಸಿಸಿ ಕ್ಯಾಮರಾಗಳನ್ನು ಆಫ್ ಮಾಡಿಕೊಂಡು ಸಜ್ಜಾಗಿದ್ದರು ಎಂದು ತಿಳಿದುಬಂದಿದೆ..ಸ್ಥಳದಲ್ಲಿ ನರ್ಸ್ ಬಳಸಿದ್ದ ಬ್ಲೇಡ್ ಪತ್ತೆಯಾಗಿದೆ.. ನರ್ಸ್ ಬ್ಲೇಡ್‌ನಿಂದ ಪ್ರತಿರೋಧ ತೋರದಿದ್ದರೆ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಆದಂತೆಯೇ ಆಗುವ ಸಾಧ್ಯತೆ ಇತ್ತು.. ನರ್ಸ್ ಹೊರಡುವಾಗ ಮೂವರೂ ಆರೋಪಿಗಳು ಆಸ್ಪತ್ರೆಯಲ್ಲೇ ಕುಳಿತು ಮದ್ಯಪಾನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ..