ಸೋಮವಾರದವರೆಗೆ ಮಾಜಿ ಸಚಿವ ರೇವಣ್ಣಗೆ ರಿಲೀಫ್
ಬೆಂಗಳೂರು; ಮಾಜಿ ಸಚಿವ ರೇವಣ್ಣ ಅವರಿಗೆ ಸೋಮವಾರದವರೆಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಇಂದು ಜಾಮೀನು ಅರ್ಜಿ ವಿಚಾರಣೆ ಮುಗಿದಿದ್ದು, ಸೋಮವಾರಕ್ಕೆ ತೀರ್ಪು ಕಾಯ್ದಿರಿಸಲಾಗಿದೆ..
ನ್ಯಾಯಾಧೀಶರು ಮಧ್ಯಂತರ ಜಾಮೀನು ಸೋಮವಾರದವರೆಗೂ ಮುಂದುವರಿಕೆ ಮಾಡಿದ್ದಾರೆ.. ವಾದ-ಪ್ರತಿವಾದ ಆಲಿಸಿದ ಬಳಿಕ ತೀರ್ಪನ್ನು ಕಾಯ್ದಿರಿಸಲಾಗಿದೆ.. ಇದರಿಂದಾಗಿ ರೇವಣ್ಣಗೆ ಸಧ್ಯಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.. ಸೋಮವಾರ ಪ್ರಕಟವಾಗುವ ತೀರ್ಪಿನ ಮೇಲೆ ಭವಿಷ್ಯ ನಿಂತಿದೆ..
ಕೆಲಸದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ರೇವಣ್ಣ ಅವರ ಮೇಲಿದೆ.. ಈ ಪ್ರಕರಣದಲ್ಲಿ ಬೇಲಬಲ್ ಸೆಕ್ಷನ್ ದಾಖಲಾದ ಹಿನ್ನೆಲೆಯಲ್ಲಿ ನಿನ್ನೆಯೇ ರೇವಣ್ಣ ಅವರು ಕೋರ್ಟ್ಗೆ ಹಾಜರಾಗಿದ್ದರು.