CrimeLifestyle

ತನ್ನದೇ ಹೆಂಡತಿ ಜೊತೆ ಲೈಂಗಿಕಕ್ರಿಯೆ ನಡೆಸಿದ್ದಕ್ಕೆ ವ್ಯಕ್ತಿಗೆ 7 ವರ್ಷ ಜೈಲು..!

ಮೀರತ್; ತಾಳಿ ಕಟ್ಟಿದ ಹೆಂಡತಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.. ಇದಕ್ಕೆ ಕಾರಣ ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿ ಲೈಂಗಿಕ ಕ್ರಿಯೆ ನಡೆಸಿದ್ದು..

   ಈಗ 30 ವರ್ಷ ವಯಸ್ಸಾಗಿರುವ ವ್ಯಕ್ತಿ 2015ರಲ್ಲಿ 13 ವರ್ಷದ ಬಾಲಕಿ ಜೊತೆ ಓಡಿ ಹೋಗಿ ಮದುವೆಯಾಗಿದ್ದ. ಅಪ್ರಾಪ್ತಳ ಜೊತೆ ಲೈಂಗಿಕ ಕ್ರಿಯೆ ಕೂಡಾ ನಡೆಸಿದ್ದ.. ಈಗ ಇವರಿಗೆ ಇಬ್ಬರು ಮಕ್ಕಳಿದ್ದು, ಆ ಬಾಲಕಿ ಮತ್ತೆ ಗರ್ಭಿಣಿಯಾಗಿದ್ದಾಳೆ.. ಓಡಿ ಹೋಗಿ ವಿವಾಹವಾದ ಮೇಲೆ ಕುಟುಂಬದವರಿಗೆ ಭಯಬಿದ್ದು ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಳು. ಅನಂತರ ಆಕೆ ತಾಳಿ ಕಟ್ಟಿದವನ ಜೊತೆಯೇ ಸಂಸಾರ ನಡೆಸಿದ್ದಳು.. ಈಗ ಈಕೆಗೆ 22 ವರ್ಷವಿದ್ದರೆ, ಗಂಡನಿಗೆ 30 ವರ್ಷವಿದೆ.

 ಉತ್ತರಪ್ರದೇಶದ ಬರೇಲಿ ವಿಚಾರಣಾ ನ್ಯಾಯಾಲಯ ಈಗ ಈ ಆದೇಶ ನೀಡಿದೆ. ವಿಚಿತ್ರವೆಂದರೆ ಈ ದಂಪತಿ ಇದೀಗ ಸುಖವಾಗಿದ್ದರು. ಆದ್ರೆ 9 ವರ್ಷಗಳ ಹಿಂದಿನ ಪ್ರಕರಣದಲ್ಲಿ ಇದೀಗ ತೀರ್ಪು ಪ್ರಕಟವಾಗಿದೆ. ಆಗ ದೂರು ನೀಡಿದ್ದ ಯುವತಿ ಇದೀಗ 3ನೇ ಬಾರಿಗೆ ಗರ್ಭಿಣಿಯಾಗಿದ್ದು, ಈ ಸಮಯದಲ್ಲಿ ಗಂಡ ಜೈಲು ಶಿಕ್ಷೆ ಅನುಭವಿಸಬೇಕೆಂದು ತೀರ್ಪು ಬಂದಿದೆ. ಇದೀಗ ಆಕೆ ಗಂಡನನ್ನು ಬಚಾವ್ ಮಾಡಲು ಹೈ ಕೋರ್ಟ್ ಮೆಟ್ಟಿಲು ಹತ್ತಲು ನಿರ್ಧರಿಸಿದ್ದಾಳೆ.

Share Post