ಆರ್‌ಸಿಬಿ ಬಗ್ಗೆ ಹಗುರ ಮಾತು; ಸ್ನೇಹಿತನಿಂದಲೇ ಕೊಲೆ
ಚೆನ್ನೈ; ಆರ್‌ಸಿಬಿ ತಂಡ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಬಗ್ಗೆ ಹಗುರವಾಗಿ ಮಾತನಾಡಿದ ಯುವಕನನ್ನು ಸ್ನೇಹಿತನೇ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಅರಿಯಲೂರಿನಲ್ಲಿ ನಡೆದಿದೆ.
ವಿಘ್ನೇಶ್(24) ಎಂನಾತನೇ ಕೊಲೆಯಾದ ದುರ್ದೈವಿಯಾಗಿದ್ದಾರೆ. ಧರ್ಮರಾಜ್ (21) ಕೊಲೆ ಮಾಡಿದ ವ್ಯಕ್ತಿ. ಇಬ್ಬರೂ ಸ್ನೇಹಿತರಾಗಿದ್ದರು. ಮಲ್ಲೂರು ಬಳಿಯ ಸಿಡ್ಕೊ ಇಂಡಸ್ಟ್ರಿಯಲ್ ಎಸ್ಟೇಟ್‍ಗೆ ಹೋಗಿದ್ದ ಸಂದರ್ಭದಲ್ಲಿ ಇಬ್ಬರೂ ಮದ್ಯ ಸೇವಿಸಿ ಪಾರ್ಟಿ ಮಾಡಿದ್ದಾರೆ. ಕುಡಿದ ಅಮಲಿನಲ್ಲಿ ವಿಘ್ನೇಶ್ ಆರ್‌ಸಿಬಿ ಹಾಗೂ ಕೊಹ್ಲಿ ಬಗ್ಗೆ ಹಗುರವಾಗಿ ಮಾತನಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಧರ್ಮರಾಜ್, ವಿಘ್ನೇಶ್‌ನನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.