Sports

ಭಾರತದ ಕುಸ್ತಿಪಟು ವಿನೀಶ್‌ ಫೋಗಟ್‌ ಚಿನ್ನದ ಬೇಟೆ; ಫೈನಲ್‌ ಪಂದ್ಯದತ್ತ ಎಲ್ಲರ ಚಿತ್ತ!

ಪ್ಯಾರಿಸ್‌; ಕುಸ್ತಿಯಲ್ಲಿ ಭಾರತದ ವಿನೀಶ್‌ ಫೋಗಟ್‌ ಫೈನಲ್‌ ಪ್ರವೇಶಿಸಿದ್ದು, ಇಂದು ಚಿನ್ನದ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.. ವಿನೀಶ್‌ ಫೋಗಟ್‌ ಒಲಿಂಪಿಕ್ಸ್‌ ನಲ್ಲಿ ಕುಸ್ತಿ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿರುವ ಮೊದಲ ಆಟಗಾರ್ತಿಯಾಗಿದ್ದು, ಚಿನ್ನದ ಪದಕ ಗಳಿಸುವ ಭರವಸೆ ಮೂಡಿಸಿದ್ದಾರೆ..

ಇದನ್ನೂ ಓದಿ; ಸ್ವಂತ ಮಗಳನ್ನೇ ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ ತಾಯಿ!

ನಿನ್ನೆ ನಡೆದ ಮೂರೂ ಪಂದ್ಯಗಳಲ್ಲಿ ವಿನೀಶ್‌ ಫೋಗಟ್‌ ಗೆದ್ದು ಫೈನಲ್‌ ಪ್ರವೇಶ ಮಾಡಿದ್ದಾರೆ.. ಸೆಮಿ ಫೈನಲ್‌ ಪಂದ್ಯದಲ್ಲಿ ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಮತ್ತು ಹಾಲಿ ಚಿನ್ನದ ಪದಕ ವಿಜೇತ ಜಪಾನ್‌ನ ಯುಯಿ ಸುಸಾಕಿ ಅವರನ್ನು ವಿನೀಶ್‌ ಪೋಗಟ್‌ ಸೋಲಿಸಿದರು..
ಮಹಿಳೆಯರ ಕುಸ್ತಿ 50 ಕೆ.ಜಿ ಫ್ರೀ ಸ್ಟೈಲ್‌ ವಿಭಾಗದ ಸ್ಪರ್ಧೆ ಇದಾಗಿದ್ದು, ವಿನೀಶ್‌ ಫೋಗಟ್‌ ಅವರ ಫೈನಲ್‌ ಪಂದ್ಯದ ಬಗ್ಗೆ ಎಲ್ಲರ ಗಮನ ನೆಟ್ಟಿದೆ..

ಇದನ್ನೂ ಓದಿ; ಮದರಸಾದಲ್ಲಿ ಪೆನ್ನಿಗಾಗಿ ಜಗಳ!; 12 ವರ್ಷದ ವಿದ್ಯಾರ್ಥಿಯ ಕೊಲೆ!

Share Post