ಈ ಗ್ರಾಮಗಳಲ್ಲಿ ಹೆಚ್ಚಿದ ತೋಳಗಳ ಹಾವಳಿ; ತಿಂಗಳಲ್ಲಿ 7 ಮಕ್ಕಳ ಬಲಿ!
ಬ್ರಹ್ರೈಚ್(Uttarapradesh); ತೋಳಗಳು ಕಾಡಿನಿಂದ ನಾಡಿಗೆ ಲಗ್ಗೆ ಇಡುತ್ತಿದ್ದು, ಮಕ್ಕಳನ್ನು ಕೊಂದು ತಿನ್ನುತ್ತಿವೆ.. ಕಳೆದ ಒಂದೂವರೆ ತಿಂಗಳಲ್ಲಿ ಏಳು ಮಕ್ಕಳನ್ನು ತೋಳಗಳು ಬಲಿ ಪಡೆದಿದ್ದು, ಮೂವರು ಮಕ್ಕಳು ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.. ಉತ್ತರ ಪ್ರದೇಶದ ಬಹ್ರೈಚ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.. ಜನ ಹೊರಬರೋದಕ್ಕೂ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ..
ಇದನ್ನೂ ಓದಿ; ಹೈದರಾಬಾದ್‌ನಲ್ಲಿ ಪ್ರಿಯತಮೆಯನ್ನು ಕೊಂದ ಬೀದರ್ ಯುವಕ!
ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಸದರ್ ವ್ಯಾಪ್ತಿಯಲ್ಲಿ ತೋಳಗಳು ಗ್ರಾಮಗಳಿಗೆ ನುಗ್ಗಿ ಮಕ್ಕಳನ್ನು ಕೊಲ್ಲುತ್ತಿವೆ.. ಇದುವರೆಗೆ ಏಳು ಮಂದಿ ಸಾವನ್ನಪ್ಪಿದ್ದಾರೆ.. ಹಾರ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸುಮಾರು 30 ಗ್ರಾಮದಲ್ಲಿ ಈ ತೋಳಗಳ ಕಾಟ ಇದೆ.. ದೊಡ್ಡವರನ್ನು ಕೂಡಾ ಈ ತೋಗಳು ಸಾಯಿಸುತ್ತಿವೆ.. ಹೀಗಾಗಿ ಜನ ಮನೆಯಿಂದ ಹೊರಗೇ ಬರುತ್ತಿಲ್ಲ.. ರಾತ್ರಿಯಾದರೆ ಸಾಕು ಊರುಗಳು ಬಿಕೋ ಎನ್ನತೊಡಗಿವೆ..
ಇದನ್ನೂ ಓದಿ; ಅಸಭ್ಯವಾಗಿ ವರ್ತಿಸಿದ ಖ್ಯಾತ ನಟನ ಕಪಾಳಕ್ಕೆ ಬಾರಿಸಿದ ನಟಿ!
ಮಕ್ಕಳು ಹೊರಗೆ ಆಟವಾಡುತ್ತಿದ್ದರೆ ಅಲ್ಲಿಗೆ ಎಂಟ್ರಿ ಕೊಡುವ ತೋಳಗಳು ನೇರವಾಗಿ ಕುತ್ತಿಗೆಗೆ ಬಾಯಿ ಹಾಕಿ ಕೊಲ್ಲುತ್ತಿವೆ.. ಮೃತದೇಹಗಳನ್ನು ಕಾಡಿಗೆ ಎಳೆದೊಯ್ಯುತ್ತಿವೆ.. ಒಮ್ಮೊಮ್ಮೆ ಹಿಂಡು ಹಿಂಡಾಗಿಯೂ ತೋಳಗಳು ಬರುವುದರಿಂದ ಅವುಗಳನ್ನು ಓಡಿಸೋದು ಕೂಡಾ ಜನರಿಗೆ ಕಷ್ಟವಾಗಿದೆ ಎಂದು ತಿಳಿದುಬಂದಿದೆ..
ಬಾರಾಬಂಕಿ ಮತ್ತು ಲಖನೌ ಅರಣ್ಯ ಇಲಾಖೆ ತಂಡಗಳನ್ನು ನಿಯೋಜನೆ ಮಾಡಿದ್ದು, ಗ್ರಾಮಸ್ಥರ ರಕ್ಷಣೆಗೆ ನಿಂತಿದೆ.. ಆದರೂ ಕೂಡಾ ತೋಳಗಳ ನಿಯಂತ್ರಣ ಮಾತ್ರ ಸಾಧ್ಯವಾಗುತ್ತಿಲ್ಲ..