286ಕ್ಕೂ ಹೆಚ್ಚು ಯುವತಿಯರಿಗೆ ಬ್ಲ್ಯಾಕ್‌ಮೇಲ್; ಯೂಟ್ಯೂಬರ್‌ಗೆ 17 ವರ್ಷ ಜೈಲು!
ಸಿಡ್ನಿ(Sidney); 286 ಯುವತಿಯರಿಗೆ ಸೆಕ್ಸ್‌ಗಾಗಿ ಬ್ಲ್ಯಾಕ್ ಮೇಲ್ ಮಾಡಿದ್ದ ಯೂಟ್ಯೂಬರ್ ಗೆ ಕೋರ್ಟ್ ಬರೋಬ್ಬರಿ 17 ವರ್ಷ ಜೈಲು ಶಿಕ್ಷೆ ವಿಧಿಸಿದೆ.. ಆಸ್ಟ್ರೇಲಿಯಾ ಕೋರ್ಟ್ ಈ ತೀರ್ಪು ನೀಡಿದ್ದು, ಮೊಹಮದ್ ಉಲ್ ಅಬಿದಿನ್ ರಶೀದ್ ಎಂಬಾತನೇ ಶಿಕ್ಷೆಗೊಳಗಾದ ಯೂಟ್ಯೂಬರ್ ಆಗಿದ್ದಾನೆ.. ಈತ ಸಾಮಾಜಿಕ ಜಾಲತಾಣಗಳ ಮೂಲಕ ಅಮೆರಿಕಾ, ಇಂಗ್ಲೆಂಡ್ ಮಗತ್ತು ಫ್ರಾನ್ಸ್ ಯುವತಿಯರನ್ನು ಕಾಂಟ್ಯಾಕ್ಟ್ ಮಾಡುತ್ತಿದ್ದ.. ಅವರು ಕ್ಲೋಸ್ ಆಗುತ್ತಿದ್ದಂತೆ ಅವರೊಂದಿಗೆ ಸೆಕ್ಸ್ ವಿಚಾರಗಳನ್ನು ಮಾತನಾಡುತ್ತಿದ್ದ.. ಅದನ್ನು ಚಿತ್ರೀಕರಣ ಮಾಡಿಕೊಳ್ಳುತ್ತಿದ್ದ.. ಅದನ್ನು ತೋರಿಸಿ ಯುವತಿಯರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ..
ಇದನ್ನೂ ಓದಿ; ಈ ಗ್ರಾಮಗಳಲ್ಲಿ ಹೆಚ್ಚಿದ ತೋಳಗಳ ಹಾವಳಿ; ತಿಂಗಳಲ್ಲಿ 7 ಮಕ್ಕಳ ಬಲಿ!
ನಾನು ಹೇಳಿದಂತೆ ಕೇಳಬೇಕು.. ಇಲ್ಲದಿದ್ದರೆ ನನ್ನ ಜೊತೆ ಮಾತನಾಡಿದ ಅಶ್ಲೀಲ ಮಾತುಗಳ ಆಡಿಯೋಗಳು, ನನ್ನೊಂದಿಗೆ ಹಂಚಿಕೊಂಡ ಖಾಸಗಿ ಫೋಟೋ, ವಿಡಿಯೋಗಳನ್ನು ಬಹಿರಂಗ ಮಾಡುತ್ತೇನೆ. ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಕಳುಹಿಸುತ್ತೇನೆ ಎಂದು ಬೆದರಿಸುತ್ತಿದ್ದ ಎಂದು ತಿಳಿದುಬಂದಿದೆ..
ಬ್ಲಾಕ್‌ಮೇಲ್ ತನ್ನೊಂದಿಗೆ ಲೈಂಗಿಕ ಸಂಪರ್ಕ ಹೊಂದವಂತೆ ಬೆದರಿಕೆ ಹಾಕುತ್ತಿದ್ದ ಆತ, ಅದನ್ನು ಲೈವ್ ಸ್ಟ್ರೀಮ್ ಕೂಡಾ ಮಾಡಿದ್ದ ಎನ್ನಲಾಗಿದೆ.. ಈ ಸಂಬಂಧ ಆತನನ್ನು ಆಸ್ಟ್ರೇಲಿಯಾದಲ್ಲಿ ಬಂಧಿಸಲಾಗಿತ್ತು.. ಈಗ ಆರೋಪಿಗೆ 17 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ..
ಇದನ್ನೂ ಓದಿ; ಈ ರೈಲು ನಿಲ್ದಾಣಕ್ಕೆ ಎಂಟ್ರಿ ಕೊಡಬೇಕಂದ್ರೂ ವೀಸಾ, ಪಾಸ್‌ಪೋರ್ಟ್ ಕಂಪಲ್ಸರಿ!