ಬೇಡ, ಬೇಡ ಎಂದರೂ ಹೊತ್ತೊಯ್ದು ಸಾಮೂಹಿಕ ಅತ್ಯಚಾರ
ಆಗ್ರಾ; ಉತ್ತರ ಪ್ರದೇಶದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಆಗ್ರಾದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಅದೇ ಹೋಟೆಲ್‌ನಲ್ಲಿ ನಾಲ್ವರು ಕಾಮುಕರು ಬಲವಂತವಾಗಿ ಕೊಠಡಿಗೆ ಹೊತ್ತೊಯ್ದು ಸಾಮೂಹಿಕ ಅತ್ಯಚಾರ ನಡೆಸಿದ್ದಾರೆ. ಅನಂತರ ಅದರ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ನಾಲ್ವರು ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಅತ್ಯಾಚಾರದ ಆರೋಪಗಳಲ್ಲದೆ, ಕೊಲೆ ಯತ್ನದ ಆರೋಪಗಳನ್ನು ಸಹ ಹಾಕಲಾಗಿದೆ. ಸಂತ್ರಸ್ತೆಯನ್ನು ಹೊತ್ತೊಯ್ಯುವ, ಸಂತ್ರಸ್ತೆಯ ನೆರವಿಗೆಗಾಗಿ ಅಂಗಲಾಚುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.