LifestyleNational

ಈ ರೈಲು ನಿಲ್ದಾಣಕ್ಕೆ ಎಂಟ್ರಿ ಕೊಡಬೇಕಂದ್ರೂ ವೀಸಾ, ಪಾಸ್‌ಪೋರ್ಟ್‌ ಕಂಪಲ್ಸರಿ!

ನವದೆಹಲಿ; ಬೇರೆ ದೇಶಕ್ಕೆ ಹೋಗಬೇಕಂದ್ರೆ ವಿಮಾನ ನಿಲ್ದಾಣದಲ್ಲಿ ವೀಸಾ, ಪಾಸ್‌ಪೋರ್ಟ್‌ ತೋರಿಸಲೇಬೇಕು.. ಇಲ್ಲಾ ಅಂದ್ರೆ ಎಂಟ್ರಿ ಸಿಗೋದಿಲ್ಲ… ಆದ್ರೆ ನಮ್ಮ ಭಾರತದಲ್ಲೇ ಒಂದು ರೈಲು ನಿಲ್ದಾಣ ಇದೆ.. ಈ ನಿಲ್ದಾಣದೊಳಗೆ ಎಂಟ್ರಿ ಕೊಡಬೇಕು ಅಂದ್ರೂ ವೀಸಾ, ಪಾಸ್‌ಪೋರ್ಟ್‌ ಬೇಕು.. ಇಲ್ಲಾಂದ್ರೆ ಈ ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್‌ಗೂ ಹೋಗೋದಕ್ಕೆ ಆಗೋದಿಲ್ಲ.. ಅಷ್ಟಕ್ಕೂ ಈ ರೈಲು ನಿಲ್ದಾಣ ಇರೋದು ಎಲ್ಲಿ ಅಂತೀರಾ..? ಈ ವರದಿ ನೋಡಿ..

ಇದನ್ನೂ ಓದಿ; ಅಸಭ್ಯವಾಗಿ ವರ್ತಿಸಿದ ಖ್ಯಾತ ನಟನ ಕಪಾಳಕ್ಕೆ ಬಾರಿಸಿದ ನಟಿ!

ಈ ರೈಲು ನಿಲ್ದಾಣದ ಹೆಸರು ಅಟ್ಟಾರಿ ಶ್ಯಾಮ್‌ ಸಿಂಗ್‌ ರೈಲು ನಿಲ್ದಾಣ.. ಅಮೃತಸರದಲ್ಲಿ ಬರುತ್ತದೆ.. ಇಲ್ಲಿಗೆ ಹೋಗಲು ಭಾರತೀಯರೇ ಆದರೂ ಕೂಡಾ ವೀಸಾ ಹಾಗೂ ಪಾಸ್‌ಪೋರ್ಟ್‌ ಬೇಕೇಬೇಕು.. ಯಾಕಂದ್ರೆ ಇಲ್ಲಿಂದ ಹೋಗೋ ರೈಲುಗಳೆಲ್ಲಾ ಪಾಕಿಸ್ತಾನಕ್ಕೆ ಹೋಗುತ್ತವೆ.. ಹೀಗಾಗಿ ಪಾಕಿಸ್ತಾನಕ್ಕೆ ಹೋಗೋರು ಮಾತ್ರ ಈ ರೈಲು ನಿಲ್ದಾಣಕ್ಕೆ ಎಂಟ್ರಿ ಕೊಡ್ತಾರೆ.. ಪಾಕಿಸ್ತಾನಕ್ಕೆ ಹೋಗಬೇಕು ಅಂದ್ರೆ ಪಾಕಿಸ್ತಾನದ ವೀಸಾ ಬೇಕು, ಜೊತೆಗೆ ಪಾಸ್‌ ಪೋರ್ಟ್‌ ಇರಬೇಕು.. ಇವೆರಡೂ ತೋರಿಸಿಯೇ ನಾವು ಇಲ್ಲಿಗೆ ಎಂಟ್ರಿ ಕೊಡಬೇಕಾಗುತ್ತದೆ..

ಇದನ್ನೂ ಓದಿ; ಒಂದು ರೂಪಾಯಿಯೂ ಕಟ್ಟದೆ 7 ಲಕ್ಷ ರೂಪಾಯಿ ಇನ್ಶೂರೆನ್ಸ್‌ ಸಿಗುತ್ತೆ!

ರೈಲುಗಳು ಅಟ್ಟಾರಿ ಗಡಿಯಿಂದ ಪಾಕಿಸ್ತಾನಕ್ಕೆ ಹೋಗುತ್ತವೆ. ಉತ್ತರ ರೈಲ್ವೆಯ ಫಿರೋಜ್‌ಪುರ ವಿಭಾಗದ ಅಡಿಯಲ್ಲಿ ಅಟ್ಟಾರಿ ನಿಲ್ದಾಣ ಬರಲಿದ್ದು, ವಿಶೇಷವೆನಿಸಿದೆ. ಈ ನಿಲ್ದಾಣಕ್ಕೆ ಭಾರತೀಯ ಸೇನೆ ಭದ್ರತೆ ಒದಗಿಸುತ್ತದೆ..

Share Post