CrimeDistricts

3 ವರ್ಷದಲ್ಲಿ 5 ಮದುವೆಯಾದ ಹುಬ್ಬಳ್ಳಿಯ ಹೆಣ್ಣು!

ತುಮಕೂರು; ಹುಡುಗರಿಗೆ 30 ವರ್ಷದ ದಾಟಿದರೆ ಇನ್ನೂ ಮದುವೆಯಾಗಿಲ್ವಾ ಅಂತ ಎಲ್ಲಾ ಕೇಳ್ತಿರುತ್ತಾರೆ.. ಇತ್ತ 30-35 ದಾಟಿದ ಹುಡುಗರಿಗೆ ಹೆಣ್ಣು ಸಿಗೋದು ಕೂಡಾ ಕಷ್ಟ ಆಗಿಬಿಟ್ಟಿರುತ್ತೆ.. ಇಂತಹ ಸಂದರ್ಭದಲ್ಲಿ ಯಾರೋ ಒಬ್ಬರು ಸಿಕ್ಕರೆ ಸಾಕು ಅಂತ ಕಾಯುತ್ತಿರುತ್ತಾರೆ.. ಇಂತಹ ಸಂದರ್ಭದಲ್ಲಿ ಸ್ವಲ್ಪ ಯಾಮಾರಿದರೂ ಪಂಗನಾಮ ಗ್ಯಾರೆಂಟಿ.. ಯಾಕಂದ್ರೆ, ಹೀಗೆ ವಯಸಾದರೂ ಮದುವೆಯಾಗದ ಹುಡುಗರಿಗೆ ಮೋಸ ಮಾಡಲೆಂದೇ ಹಲವು ಗ್ಯಾಂಗ್‌ಗಳಿವೆ.. ನಕಲಿ ಮದುವೆಗಳಾಗಿ ಯುವಕರನ್ನು ದೋಚುವ ಹೆಣ್ಣು ಮಕ್ಕಳು ಕೂಡಾ ಹುಟ್ಟಿಕೊಂಡಿದ್ದಾರೆ.. ತುಮಕೂರು ಜಿಲ್ಲೆಯ ಹೊಡುಗನೊಬ್ಬ ಇದೇ ರೀತಿ ಮೋಸ ಹೋಗಿದ್ದಾನೆ.. ಈ ಹುಡುಗನಿಗೆ ಮೋಸ ಮಾಡಿದ ಮಹಿಳೆ ಮೂರು ವರ್ಷದಲ್ಲಿ ಐದು ಮದುವೆಯಾಗಿದ್ದಾಳಂತೆ!

ಇದನ್ನೂ ಓದಿ; ಕಾರಿನಲ್ಲಿ ಇಬ್ಬರು ಯುವತಿಯರ ಜೊತೆ ಯುವಕನ ರೊಮ್ಯಾನ್ಸ್‌!

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಅತ್ತಿಗಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.. ಇದೇ ಗ್ರಾಮದ ಪಾಲಾಕ್ಷಯ್ಯ ಎಂಬುವವರ ಪುತ್ರ ದಯಾನಂದಮೂರ್ತಿ ಅವರಿಗೆ 37 ವರ್ಷವಾದರೂ ಹೆಣ್ಣು ಸಿಗುತ್ತಿರಲಿಲ್ಲ.. ಹೀಗಿರುವಾಗ ಕುಷ್ಟಗಿ ಮೂಲದ ಬಸವರಾಜು ಎಂಬುವವರ ಮೂಲಕ ಲಕ್ಷ್ಮೀ ಎಂಬಾಕೆ ಪರಿಚಯ ಆಗಿದ್ದು, ಆಕೆ ಮದುವೆ ಬ್ರೋಕರ್‌ ಎಂದು ಹೇಳಿಕೊಂಡು ಒಬ್ಬ ಮಹಿಳೆಯನ್ನು ತೋರಿಸಿದ್ದಾಳೆ.. ಆಕೆಗೆ ತಂದೆ-ತಾಯಿ ಇಲ್ಲ ಎಂದು ಹೇಳಿದ್ದಾಳೆ.. ನಂತರ ಹುಡುಗನ ಮನೆಗೇ ಕೋಮಲಾ ಎಂಬಾಕೆಯನ್ನು ಕರೆದುಕೊಂಡು ಬಂದು ಮದುವೆ ಮಾಡಿಸಿದ್ದಾರೆ..

ಇದನ್ನೂ ಓದಿ; Pistol lady; ಪಾತ್ರೆಯಲ್ಲ, ಪಿಸ್ತೂಲ್‌ ತೊಳೆಯುತ್ತಾಳೆ ಈ ಮಹಿಳೆ!

ಕಳೆದ ವರ್ಷದ ನವೆಂಬರ್‌ 11ರಂದು ಈ ಮದುವೆ ನಡೆದಿದೆ.. ಈ ವೇಳೆ ಹುಡುಗನ ಕಡೆಯವರು ಹೆಣ್ಣಿಗೆ 25 ಗ್ರಾಂ ಚಿನ್ನಾಭರಣ ನೀಡಿದ್ದಾರೆ. ಜೊತೆಗೆ ಹೆಣ್ಣು ತೋರಿಸಿದ ಬ್ರೋಕರ್‌ ಲಕ್ಷ್ಮೀಗೆ 1.5 ಲಕ್ಷ ನೀಡಿದ್ದರು.. ಮದುವೆ ಎಲ್ಲಾ ಮುಗಿದ ಮೇಲೆ ನಮ್ಮ ಸಂಪ್ರದಾಯದಂತೆ ಹೆಣ್ಣನ್ನು ಮಾತ್ರ ತವರಿಗೆ ಕರೆದುಕೊಂಡು ಹೋಗಬೇಕು.. ಎರಡು ದಿನದ ನಂತರ ಕಳುಹಿಸಿಕೊಡುತ್ತೇವೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ.. ಆದ್ರೆ ಎಷ್ಟು ದಿನ ಆದ್ರೂ ವಾಪಸ್‌ ಬಂದಿಲ್ಲ.. ಫೋನ್‌ಗೂ ಉತ್ತರ ಇಲ್ಲ..
ಅನುಮಾನಗೊಂಡು ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ.. ಕೊನೆಗೆ ಅವರು ಪೊಲೀಸರಿಗೆ ದೂರು ನೀಡಿದ್ದರು.. ಕೊನೆಗೂ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ..

ಇದನ್ನೂ ಓದಿ; Headache; ಕ್ಷಣಗಳಲ್ಲಿ ತಲೆನೋವು ಕಡಿಮೆಯಾಗಬೇಕಾ..?

Share Post