CrimeNational

ಬ್ಯಾರಿಕೇಡ್‌ಗೆ ಗುದ್ದಿ ಸೇತುವೆಯಿಂದ ಕೆಳಗೆ ಬಿದ್ದ ಇಬ್ಬರ ದುರ್ಮರಣ!

ಮುಂಬೈ; ಸೇತುವೆ ಮೇಲೆ ಹೋಗುತ್ತಿದ್ದಾಗ ಬೈಕ್‌ ಒಂದು ಬ್ಯಾರಿಕೇಟ್‌ಗೆ ಗುದ್ದಿದ್ದು, ಇದರಿಂದಾಗಿ ಬೈಕ್‌ ಮೇಲಿದ್ದ ಸವಾರರು ಸೇತುವೆಯಿಂದ ಕೆಳಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾರೆ.. ಮುಂಬೈನ ಗೋರೆಗಾಂವ್‌ನಲ್ಲಿ ಈ ಘಟನೆ ನಡೆದಿದೆ.. 28 ವರ್ಷದ ವೈಭವ್​ ಗ್ರಾಮೆ ಮತ್ತು 21 ವರ್ಷದ ಆನಂದ್​ ಇಂಗಳೆ ದಾರುಣವಾಗಿ ಸಾವನ್ನಪ್ಪಿದ್ದಾರೆ..

ಅಪಘಾತದ ರಭಸಕ್ಕೆ ಸೇತುವೆಯಿಂದ ಹಾರಿ ಕೆಳಗೆ ಬಿದ್ದಿದ್ದಾರೆ.. ಇದರಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಜೋಗೇಶ್ವರಿನಲ್ಲಿರುವ HBT ಟ್ರಾಮಾ ಕೇರ್​ ಸೆಂಟರ್​ಗೆ ಸೇರಿಸಲಾಯಿತು.. ಪರೀಕ್ಷೆ ಮಾಡಿದ ವೈದ್ಯರು ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ..

 

Share Post