DistrictsHealth

ಸೊಸೆಯ ಸಾವಿನ ಸುದ್ದಿ ಕೇಳಿ ಅತ್ತೆ ಹೃದಯಾಘಾತಕ್ಕೆ ಬಲಿ!

ಮಂಡ್ಯ; ಅತ್ತೆ-ಸೊಸೆ ಸಂಬಂಧ ಜಗಳಕ್ಕೆ ಸೀಮಿತ ಅನ್ನೋ ಮಾತಿದೆ. ಆದ್ರೆ ಎಷ್ಟೋ ಮನೆಗಳಲ್ಲಿ ಅತ್ತೆ, ಸೊಸೆಯರು ಅಮ್ಮ, ಮಗಳ ರೀತಿ ಇರುತ್ತಾರೆ. ಒಬ್ಬರಿಗೊಬ್ಬರು ಬಿಟ್ಟಿರದ ಬಾಂದವ್ಯ ಕೂಡಾ ಅವರದಾಗಿರುತ್ತದೆ. ಇದೇ ರೀತಿಯ ಬಾಂದವ್ಯದ ಕಾರಣ ಮಂಡ್ಯದಲ್ಲಿ ಅತ್ತೆ, ಸೊಸೆ ಸಾವಿನಲ್ಲೂ ಒಂದಾಗಿದ್ದಾರೆ. ಸೊಸೆಯ ಸಾವಿನ ಸುದ್ದಿ ಕೇಳಿದ ಅತ್ತೆ ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ. 

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾಡು ಅಂಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿನ್ನೆ ಸಂಜೆ ಸೊಸೆ 42 ವರ್ಷದ ಸುಶೀಲಾ ಸಾವನ್ನಪ್ಪಿದ್ದಾರೆ. ಈ ಸುದ್ದಿ ಕೇಳುತ್ತಿದ್ದಂತೆ ಅತ್ತೆ 75 ವರ್ಷ ಹುಚ್ಚಮ್ಮ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹುಚ್ಚಮ್ಮ ಅವರಿಗೆ ಐವರು ಗಂಡು ಮಕ್ಕಳು, ಅದರಲ್ಲಿ ಎರಡನೇ ಮಗನ ಪತ್ನಿ ಈ ಸುಶೀಲಾ. ಇವರಿಬ್ಬರ ಬಾಂದವ್ಯ ಅಮ್ಮ-ಮಗಳ ರೀತಿ ಇತ್ತು ಎನ್ನಲಾಗಿದೆ.

 

 

 

Share Post