ಮೊಮ್ಮಗ ಆತ್ಮಹತ್ಯೆ ಮಾಡಿಕೊಂಡ; ಮೃತದೇಹ ನೋಡಿದ ಅಜ್ಜನಿಗೆ ಹೃದಯಾಘಾತ!
ಛತ್ತರ್‌ಪುರ್; ಮೊಮ್ಮಗ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿ ಅಜ್ಜ ಹೃದಯಾಘಾತಕ್ಕೆ ಬಲಿಯಾದ ದಾರುಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.. ಇಲ್ಲಿನ ಛತ್ತರ್‌ಪುರ ಎಂಬ ಗ್ರಾಮದಲ್ಲಿ ಬಡಮಲ್ಹಾರ ನಿವಾಸಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಆತನ ಶವ ನೋಡುತ್ತಿದ್ದಂತೆ ಅವರ ಅಜ್ಜ ಕುಸಿದುಬಿದ್ದಿದ್ದಾರೆ.. ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ..
ಇದನ್ನೂ ಓದಿ; ಕ್ಷುದ್ರ ಪೂಜೆಗಾಗಿ ಬಾಲಕಿಯ ಬಲಿ..!; ಸಿಕ್ಕಿಬಿದ್ದ ಆರೋಪಿಗಳು!
ಮೊಮ್ಮನ ಮನೆಯ ಹಿಂದೆ ನಿರ್ಮಿಸಿದ್ದ ಗೋದಾಮಿನಲ್ಲಿ ನೇಣಿಗೆ ಶರಣಾಗಿದ್ದ.. ಅದನ್ನು ಕಂಡವರು ಆತನ ದೇಹವನ್ನು ಕೆಳಗಿಳಿಸಿ ಮನೆಯ ಬಳಿಗೆ ತಂದಿದ್ದಾರೆ.. ಇದನ್ನು ನೋಡುತ್ತಿದ್ದಂತೆ ಅಜ್ಜ ಕುಸಿದುಬಿದ್ದಿದ್ದಾರೆ.. ಎತ್ತಿ ಕೂರಿಸಿದರೂ ಅವರು ಅಷ್ಟೊತ್ತಿಗೆ ಇಹಲೋಕ ತ್ಯಜಿಸಿದ್ದಾರೆ.. ವೈದ್ಯರು ಪರೀಕ್ಷೆ ಮಾಡಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.. ಹೀಗಾಗಿ ಒಂದೇ ಸಮಯಕ್ಕೆ ಅಜ್ಜ ಹಾಗೂ ಮೊಮ್ಮಗನ ಅಂತ್ಯಕ್ರಿಯೆ ನಡೆಸಲಾಗಿದೆ.. ಆ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ..
ಇದನ್ನೂ ಓದಿ; ಬಹುಮಾನ ಬಂದಿದೆ ಎಂದು ಲೆಟರ್ ಬರುತ್ತೆ!; ನಂಬಿದ್ರೆ ಮುಗೀತು ಕಥೆ!
ಮೊಮ್ಮಗನ ಸಾಕಷ್ಟು ಸಾಲ ಮಾಡಿಕೊಂಡಿದ್ದ.. ಅದನ್ನು ತೀರಿಸಲಾಗದೆ ಪರದಾಡುತ್ತಿದ್ದ.. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ..