National

ಕೋತಿ ಅಂತ್ಯಸಂಸ್ಕಾರದಲ್ಲಿ 1500 ಮಂದಿ ಭಾಗಿ

ಭೋಪಾಲ್: ಭಾರತೀಯರಲ್ಲಿ ಬಹುತೇಕರು ಕೋತಿಯನ್ನು ಆಂಜನೇಯನ ರೂಪವೆಂದು ನಂಬಿದ್ದಾರೆ. ಹೀಗಾಗಿಯೇ ಕೋತಿ ಸತ್ತಾಗ ಅದರ ಸಂಸ್ಕಾರ ಮಾಡುವುದನ್ನು ನಾವು ನೋಡಿದ್ದೇವೆ. ಅದೇ ರೀತಿ ಭೋಪಾಲ್‌ನಲ್ಲಿ ಕೋತಿಯೊಂದು ಮೃತಪಟ್ಟಿತ್ತು. ಈ ಕೋತಿ ಅಂತ್ಯ ಸಂಸ್ಕಾರಕ್ಕೆ ಬಂದವರು ಬರೋಬ್ಬರಿ 1500 ಮಂದಿ.

ಮಧ್ಯಪ್ರದೇಶದ ರಾಜಘರ್ ಜಿಲ್ಲೆಯ ದಾಲುಪುರಾ ಗ್ರಾಮದಲ್ಲಿ ಸಾವಿರಾರು ಜನ ಸೇರಿ ಕೋತಿಯ ಅಂತ್ಯಸಂಸ್ಕಾರ ನಡೆಸಿದ್ದಾರೆ. ಅಂದಹಾಗೆ, ಈ ಕೋತಿ ಗ್ರಾಮಸ್ಥರ ಪ್ರೀತಿಗೆ ಪಾತ್ರವಾಗಿತ್ತು. ಜನರೊಂದಿಗೆ ಅನ್ಯೋನ್ಯವಾಗಿತ್ತು. ಆದ್ರೆ ಅದು ನಿನ್ನೆ ಅನಾರೋಗ್ಯದಿಂದ ಮೃತಪಟ್ಟಿದೆ. ಹೀಗಾಗಿ ಊರಿನವರೆಲ್ಲಾ ಸೇರಿ ತಮ್ಮ ಪ್ರೀತಿ ಪಾತ್ರ ಕೋತಿಗೆ ಅಂತ್ಯಸಂಸ್ಕಾರ ಮಾಡಿದ್ದಾರೆ.

 

Share Post