NationalPolitics

ರಾಜಕೀಯ ನಿವೃತ್ತಿ ಘೋಷಿಸಿದರಾ ಸೋನಿಯಾಗಾಂಧಿ..?; ರಾಯ್‌ಪುರದಲ್ಲಿ ಅವರು ಹೇಳಿದ್ದೇನು..?

ರಾಯ್‌ಪುರ; ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ತಮ್ಮ ರಾಜಕೀಯ ಇನ್ನಿಂಗ್ಸ್‌ ಮುಕ್ತಾಯವಾಗಬಹುದು ಎಂದು ಹೇಳಿಕೊಂಡಿದ್ದಾರೆ. ರಾಯ್‌ಪುರದಲ್ಲಿ ಮಾತನಾಡಿರುವ ಅವರು, ಭಾರತ್‌ ಜೋಡೋ ಯಾತ್ರೆಯೊಂದಿಗೆ ನಮ್ಮ ಇನ್ನಿಂಗ್ಸ್‌ ಮುಕ್ತಾಯವಾಗಬಹುದು ಎಂದು ಹೇಳಿದ್ದಾರೆ.

ರಾಜಕೀಯ ನಿವೃತ್ತಿ ಬಗ್ಗೆ ಪ್ರಸ್ತಾಪ ಮಾಡಿರುವ ಸೋನಿಯಾ ಗಾಂಧಿಯವರು, ಇದು ಪಕ್ಷಕ್ಕೆ ಹೊಸ ತಿರುವು ಎಂದು ಹೇಳಿದ್ದಾರೆ. ಮನಮೋಹನ್‌ ಸಿಂಗ್‌ ಅವರ ಹತ್ತು ವರ್ಷದ ಆಡಳಿತ ಹಾಗೂ ಅವರ ಸಮರ್ಥ ನಾಯಕತ್ವ ಹಾಗೂ ಆಗಿನ ನಮ್ಮ ವಿಜಯಗಳು ನನಗೆ ವೈಯಕ್ತಿಕವಾಗಿ ಸಾಕಷ್ಟು ತೃಪ್ತಿ ನೀಡಿವೆ. ಕಾಂಗ್ರೆಸ್‌ ಇದು ಸವಾಲಿನ ಸಮಯ ಎಂದೂ ಅವರು ಹೇಳಿದ್ದಾರೆ.

Share Post