ಬಹುಮಾನ ಬಂದಿದೆ ಎಂದು ಲೆಟರ್ ಬರುತ್ತೆ!; ನಂಬಿದ್ರೆ ಮುಗೀತು ಕಥೆ!
ಬೆಂಗಳೂರು; ಆನ್‌ಲೈನ್ ವ್ಯವಹಾರಗಳು ಹೆಚ್ಚಾಗುತ್ತಿದ್ದಂತೆ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ.. ಆನ್‌ಲೈನ್ ವಂಚಕರು ನಾನಾ ರೀತಿಯಲ್ಲಿ ಜನರನ್ನು ಮೋಸ ಮಾಡುತ್ತಿದ್ದಾರೆ.. ಬ್ಯಾಂಕ್ ಅಧಿಕಾರಿಗಳೆಂದು ಫೋನ್ ಮಾಡಿ ಒಟಿಪಿ ಪಡೆದು ವಂಚನೆ ಮಾಡುತ್ತಿದ್ದ ಖದೀಮರು ಈಗ ಬೇರೆ ಬೇರೆ ದಾರಿ ಹಿಡಿಯುತ್ತಿದ್ದಾರೆ.. ಇದೀಗ ವಂಚಕರು ಕಂಪನಿಗಳ ಹೆಸರಿನಲ್ಲಿ ನಿಮಗೆ ಲಕ್ಷಾಂತರ ಬಹುಮಾನ ಬಂದಿದೆ ಎಂದು ಲೆಟರ್ ಕಳುಹಿಸುತ್ತಿದ್ದಾರೆ..
ಇದನ್ನೂ ಓದಿ; 30 ಲಕ್ಷ ರೂ. ಆಸೆಗೆ ಕಿಡ್ನಿ ದಾನ ಮಾಡಿದ ಆಟೋ ಚಾಲಕ!; ಪಂಗನಾಮ ಹಾಕಿದ ವಂಚಕರು!
ಯಾವುದಾದರೂ ಪ್ರತಿಷ್ಠಿತ ಕಂಪನಿ ಹೆಸರಿನಲ್ಲಿ ಲೆಟರ್ ಕಳುಹಿಸಿ, ನಿಮಗೆ ನಮ್ಮ ಕಂಪನಿಯ ಲಕ್ಕಿ ಡ್ರಾನಲ್ಲಿ ಲಕ್ಷಾಂತರ ರೂಪಾಯಿ ಹಣ ಬಂದಿದೆ.. ಅದನ್ನು ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಟ್ರಾನ್ಸ್ ಫರ್ ಮಾಡಿಕೊಳ್ಳಲು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಎಂದು ಹೇಳಿರುತ್ತಾರೆ. ಒಂದು ವೇಳೆ ಅದನ್ನು ಮಾಡಿದರೆ ಹಣ ಕಳೆದುಕೊಳ್ಳುವುದು ಪಕ್ಕಾ..
ಇದನ್ನೂ ಓದಿ; ಕಾಲೇಜು ವಿದ್ಯಾರ್ಥಿನಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ..!
ರಾಜ್ಯದಲ್ಲೂ ಕೂಡಾ ಹಲವರಿಗೆ ಇಂತಹ ಲೆಟರ್‌ಗಳು ಬರಲಾರಂಭಿಸಿವೆ.. ವ್ಯಕ್ತಿಯೊಬ್ಬರು ಅದರ ವಿಡಿಯೋ ಒಂದನ್ನು ಅಪ್‌ಲೋಡ್ ಮಾಡಿ ಜನರಲ್ಲಿ ಜಾಗೃತಿ ಕೂಡಾ ಮೂಡಿಸುವ ಕೆಲಸ ಮಾಡಿದ್ದಾರೆ..