BengaluruCrime

ಬೆಂಗಳೂರಿನ ಶಾಲೆ ಬಳಿ ಜಿಲೆಟಿನ್‌ ಕಡ್ಡಿ, ಡಿಟೋನೇಟರ್‌ಗಳ ಪತ್ತೆ!

ಬೆಂಗಳೂರು; ಮಾರ್ಚ್‌ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಶಂಕಿತ ಉಗ್ರನೊಬ್ಬ ಬಾಂಬ್‌ ಸ್ಫೋಟಿಸಿದ ಘಟನೆ ಇನ್ನೂ ನಮ್ಮ ನೆನಪಿನಿಂದ ಮಾಸಿಲ್ಲ.. ಆಗಲೇ ಮತ್ತೊಂದು ಆಘಾತಕಾರಿ ಸುದ್ದಿ ಸಿಕ್ಕಿದೆ.. ಬೆಂಗಳೂರಿನ ಶಾಲೆಯೊಂದರ ಬಳಿ ಸ್ಫೋಟಕ್ಕೆ ಬಳಸುವ ವಸ್ತುಗಳ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ..

ಇದನ್ನೂ ಓದಿ; ಮಂಡ್ಯ ಬಳಿ ಬರೋಬ್ಬರಿ 1 ಕೋಟಿ ರೂಪಾಯಿ ವಶ!

ಜಿಲೆಟಿನ್‌ ಕಡ್ಡಿ, ಡಿಟೋನೇಟರ್‌ಗಳು ಪತ್ತೆ!;

ಬೆಂಗಳೂರಿನ ಬೆಳ್ಳಂದೂರಿನ ಪ್ರಕ್ರಿಯಾ ಶಾಲೆಯ ಮುಂಭಾಗದ ಖಾಲಿ ಜಾಗದಲ್ಲಿ ಸ್ಫೋಟಕ ವಸ್ತುಗಳು ಸಿಕ್ಕಿವೆ.. ಜಿಲೆಟಿನ್‌ ಕಡ್ಡಿಗಳು, ಡಿಟೋನೇಟರ್‌ಗಳು ಸೇರಿ ಸ್ಫೋಟಕಕ್ಕೆ ಬಳಸುವ ಹಲವು ವಸ್ತುಗಳು ಒಂದು ಬ್ಯಾಗ್‌ನಲ್ಲಿ ಸಿಕ್ಕಿವೆ.. ಟ್ರ್ಯಾಕ್ಟರ್‌ ಒಂದರಲ್ಲಿ ಈ ಸ್ಫೋಟಕಗಳು ಸಿಕ್ಕಿದ್ದು, ಆತಂಕಕ್ಕೆ ಕಾರಣವಾಗಿದೆ.. ಕಟ್ಟಡ ನಿರ್ಮಾಣದ ಜಾಗದಲ್ಲಿರುವ ಬಂಡೆಗಳ ಸ್ಫೋಟಕ್ಕೆ ಬಳಸಲು ಇವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.. ಆದ್ರೆ, ಇಷ್ಟೊಂದು ಸ್ಫೋಟಕ ವಸ್ತುಗಳನ್ನು ಇವರು ಹೇಗೆ ಅಕ್ರಮವಾಗಿ ಸಂಗ್ರಹಿಸಿದರು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ; ಕಾಂಗ್ರೆಸ್‌ ಎರಡನೇ ಪಟ್ಟಿಗಾಗಿ ಸರ್ಕಸ್‌; ದೆಹಲಿಗೆ ಹೊರಟ ಸಿಎಂ ಸಿದ್ದರಾಮಯ್ಯ

ಬೆಳ್ಳಂದೂರು ಪೊಲೀಸರಿಂದ ತೀವ್ರ ತನಿಖೆ;

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ಇನ್ನೂ ಮುಂದುವರೆದಿದೆ.. ಆರೋಪಿಗಳ ಬಂಧನವಾಗಿಲ್ಲ.. ಜೊತೆಗೆ ಈಗ ಚುನಾವಣೆ ಬೇರೆ ಎದುರಾಗಿದೆ.. ಇಂತಹ ಸಂದರ್ಭದಲ್ಲಿ ಹೀಗೆ ಟ್ರ್ಯಾಕ್ಟರ್‌ನಲ್ಲಿ ಸ್ಫೋಟಕಗಳನ್ನು ಸಾಗಿಸಲಾಗುತ್ತಿರುವುದು ಹಲವು ಸಂದೇಹಗಳಿಗೆ ಎಡೆಮಾಡಿಕೊಟ್ಟಿದೆ.. ನಿಜವಾಗಲೂ ಬಂಡೆ ಹೊಡೆಯುವುದಕ್ಕಾಗಿಯೇ ಇದನ್ನು ಬಳಸುತ್ತಿದ್ದರೂ, ಇದು ಅಕ್ರಮ.. ಹೀಗಾಗಿ ಪೊಲೀಸರು ಈ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ; ಮಂಡ್ಯಕ್ಕೆ ಕುಮಾರಸ್ವಾಮಿಯೇ ಫಿಕ್ಸ್‌; ಅಖಾಡಕ್ಕೆ ರೆಡಿ ಅಂತಿದ್ದಾರೆ ಮಾಜಿ ಸಿಎಂ!

ಈ ಹಿಂದೆ ಶಾಲೆಗಳಿಗೆ ಇ-ಮೇಲ್‌ ಸಂದೇಶ ಬಂದಿತ್ತು;

ಕೆಲ ತಿಂಗಳ ಹಿಂದೆ ಅನಾಮಿಕರಿಂದ ಇ-ಮೇಲ್‌ ಸಂದೇಶ ಬಂದಿತ್ತು. ಸುಮಾರು 25ಕ್ಕೂ ಹೆಚ್ಚು ಶಾಲೆಗಳನ್ನು ಸ್ಫೋಟಿಸುತ್ತೇವೆ ಎಂದು ಆ ಇ-ಮೇಲ್‌ನಲ್ಲಿ ಹೇಳಲಾಗಿತ್ತು.. ಒಂದೇ ದಿನ 25ಕ್ಕೂ ಹೆಚ್ಚು ಶಾಲೆಗಳಿಗೆ ಒಂದೇ ಇ-ಮೇಲ್‌ ಐಡಿ ಮೂಲಕ ಬೆದರಿಕೆ ಇ-ಮೇಲ್‌ ರವಾನೆಯಾಗಿತ್ತು.. ಆದ್ರೆ ಅದು ಹುಸಿ ಅನ್ನೋದು ಸಾಬೀತಾಗಿತ್ತು.. ಆದ್ರೆ ಅಂದು ಇ-ಮೇಲ್‌ ಕಳುಹಿಸಿದವರೇ ಈಗ ಶಾಲೆಯ ಬಳಿ ಸ್ಫೋಟಕ್ಕೆ ತಂದಿರಬಹುದೇ ಎಂಬ ಅನುಮಾನ ಮೂಡಿದೆ.. ಈ ಹಿನ್ನೆಲೆಯಲ್ಲೂ ತನಿಖೆ ನಡೆಯುತ್ತಿದೆ…

ಇದನ್ನೂ ಓದಿ; ರಾಜ್‌ಕುಮಾರ್‌ ಅವರಿಗೂ ರಾಜಕೀಯ ಬೇಕಿತ್ತು; ಶಿವರಾಜ್‌ಕುಮಾರ್‌

 

Share Post