Politics

ಕಾಂಗ್ರೆಸ್‌ ಎರಡನೇ ಪಟ್ಟಿಗಾಗಿ ಸರ್ಕಸ್‌; ದೆಹಲಿಗೆ ಹೊರಟ ಸಿಎಂ ಸಿದ್ದರಾಮಯ್ಯ

ಬೆಂಗಳೂರು; ಲೋಕಸಭಾ ಚುನಾವಣೆ ಘೋಷಣೆಯಾಗಿದೆ.. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಕೇವಲ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.. ಉಳಿದ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡುವುದಕ್ಕೆ ಇನ್ನೂ ಅಳೆದೂತೂಗೋ ಲೆಕ್ಕಾಚಾರಗಳು ಮುಂದುವರೆದೇ ಇವೆ.. ಬಹುಶಃ ನಾಳೆ ಎಲ್ಲಾ ಕ್ಷೇತ್ರಗಳ ಪಟ್ಟಿ ರಿಲೀಸ್‌ ಆಗಲಿದೆ.. ಈ ಹಿನ್ನೆಲೆಯಲ್ಲಿ ಇಂದು ಅಂತಿಮ ಸುತ್ತಿನ ಸಭೆ ನಡೆಯಲಿದೆ..

ಇದನ್ನೂ ಓದಿ; ಮಂಡ್ಯಕ್ಕೆ ಕುಮಾರಸ್ವಾಮಿಯೇ ಫಿಕ್ಸ್‌; ಅಖಾಡಕ್ಕೆ ರೆಡಿ ಅಂತಿದ್ದಾರೆ ಮಾಜಿ ಸಿಎಂ!

ಸಂಜೆ ಖರ್ಗೆ ನೇತೃತ್ವದಲ್ಲಿ ಅಂತಿಮ ಸುತ್ತಿನ ಸಭೆ;

ಇಂದು ಸಂಜೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕೇಂದ್ರ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆ ನಡೆಯಲಿದೆ.. ಇಂದು ಸಂಜೆ 6 ಗಂಟೆಗೆ ಎಐಸಿಸಿ ಕಚೇರಿಯಲ್ಲಿ ಈ ಸಭೆ ನಡೆಯಲಿದ್ದು, ಕರ್ನಾಟಕದ 21 ಕ್ಷೇತ್ರ ಸೇರಿ ಹಲವು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಇಂದು ಫೈನಲ್‌ ಮಾಡಲಾಗುತ್ತದೆ.. ಬೆಳಗಾವಿ, ಮೈಸೂರು ಸೇರಿ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಗೊಂದಲ ಇದೆ.. ಇದು ಬಿಟ್ಟರೆ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಬಹುತೇಕ ಅಂತಿಮವಾಗಿದೆ.. ಇಂದಿನ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಂಡು ನಾಳೆ ಪಟ್ಟಿ ರಿಲೀಸ್‌ ಮಾಡಲಾಗುತ್ತದೆ ಎಂದು ಬಲ್ಲ ಮೂಲಗಳಿಂದ ತಿಳದುಬಂದಿದೆ..

ಇದನ್ನೂ ಓದಿ; ರಾಜ್‌ಕುಮಾರ್‌ ಅವರಿಗೂ ರಾಜಕೀಯ ಬೇಕಿತ್ತು; ಶಿವರಾಜ್‌ಕುಮಾರ್‌

ದೆಹಲಿಗೆ ಹೊರಟ ಸಿಎಂ, ಡಿಸಿಎಂ!;

ಇಂದು ಪಟ್ಟಿ ಫೈನಲ್‌ ಆಗುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಸಿಇಸಿ ಸದಸ್ಯ ಕೆ.ಜೆ.ಜಾರ್ಜ್‌ ಇಂದು ದೆಹಲಿಗೆ ತೆರಳುತ್ತಿದ್ದಾರೆ… ಇಂದು ಎಲ್ಲಾ 21 ಕ್ಷೇತ್ರಗಳ ಅಭ್ಯರ್ಥಿಗಳೂ ಇಂದು ಫೈನಲ್‌ ಆಗಲಿದ್ದಾರೆ… ಈಗಾಗಲೇ 12-15 ಕ್ಷೇತ್ರಗಳಿಗೆ ಒಂದೇ ಹೆಸರನ್ನು ಫೈನಲ್‌ ಮಾಡಲಾಗಿದ್ದು, ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ.. ಉಳಿದ ಐದಾರು ಕ್ಷೇತ್ರಗಳಿಗಷ್ಟೇ ಪೈಪೋಟಿ ಇದ್ದು, ಅಂತಿಮ ಅಭ್ಯರ್ಥಿ ಆಯ್ಕೆ ಮಾಡಬೇಕಾಗಿದೆ.. ಇದಕ್ಕಾಗಿ ಇಂದು ಸಂಜೆ ಸುದೀರ್ಘ ಚರ್ಚೆ  ನಡೆಯಲಿದೆ. ರಾಹುಲ್‌ ಗಾಂಧಿ, ಸೋನಿಯಾಗಾಂಧಿ ಕೂಡಾ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ; ಮತದಾರನ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ.?; ಮತದಾನಕ್ಕೆ ಯಾರು ಅರ್ಹರು..?

ಕಲಬುರಗಿಯಿಂದ ಕಣಕ್ಕಿಳಿಯುತ್ತಾರಾ ಖರ್ಗೆ..?;

ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭಾ ಸದಸ್ಯರಿದ್ದಾರೆ.. ಜೊತೆಗೆ ಅವರು ಎಐಸಿಸಿ ಅಧ್ಯಕ್ಷರು.. ಹೀಗಾಗಿ, ಅವರು ದೇಶಾದ್ಯಂತ ಸುತ್ತಾಡಿ ಪ್ರಚಾರ ಮಾಡಬೇಕಾಗಿದೆ.. ಈ ಹಿನ್ನೆಲೆಯಲ್ಲಿ ಅವರು ಈ ಬಾರಿ ಕಲಬುರಗಿಯಿಂದ ಸ್ಪರ್ಧೆ ಮಾಡುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಎದ್ದಿದೆ.. ಈ ಬಗ್ಗೆ ಇಂದು ನಿರ್ಧಾರವಾಗಲಿದೆ.. ಖರ್ಗೆಯವರು ಸ್ಪರ್ಧೆಯಿಂದ ಹಿಂದೆ ಸರಿದರೆ ಕಲಬುರಗಿ ಕ್ಷೇತ್ರದಿಂದ ರಾಧಾಕೃಷ್ಣ ಅವರು ಅಖಾಡಕ್ಕೆ ಧುಮುಕಲಿದ್ದಾರೆ.

ಇದನ್ನೂ ಓದಿ; ಮಾಜಿ ಸಿಎಂಗೆ ಕಾಂಗ್ರೆಸ್‌ ನಾಯಕರ ಗಾಳ; ನಾಳೆ ʻಉತ್ತರʼ ಎಂದ ಸದಾನಂದಗೌಡ!

ಪ್ರಮುಖ ಕ್ಷೇತ್ರಗಳ ಬಗ್ಗೆ ಹೆಚ್ಚು ಚರ್ಚೆ!;

ಬೆಳಗಾವಿ ಕೋಲಾರ, ಚಿಕ್ಕೋಡಿ, ಬಳ್ಳಾರಿ ಮೈಸೂರು ಸೇರಿ ಪ್ರಮುಖ ಕ್ಷೇತ್ರಗಳ ಬಗ್ಗೆ ಚರ್ಚೆಯಾಗಲಿದೆ. ಈ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಸ್ವಲ್ಪ ಗೊಂದಲದಲ್ಲಿದೆ.. ಹೀಗಾಗಿ ಇಂದು ಚರ್ಚೆ ಮಾಡಿ ಒಮ್ಮತದ ನಿರ್ಧಾರಕ್ಕೆ ಬರಲಾಗುತ್ತದೆ… ಈ ಹಿಂದೆ ಹತ್ತಕ್ಕೂ ಹೆಚ್ಚು ಸಚಿವರನ್ನು ಅಖಾಡಕ್ಕೆ ಇಳಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು.. ಆದ್ರೆ ಬಹುತೇಕ ಸಚಿವರು ಸ್ಪರ್ಧೆಗೆ ಒಪ್ಪಿಲ್ಲ.. ಈ ಕಾರಣದಿಂದ ಬೇರೆ ಅಭ್ಯರ್ಥಿಗಳನ್ನು ಫೈನಲ್‌ ಮಾಡಲಾಗುತ್ತಿದೆ… ಈ ಬಾರಿ ಕುಟುಂಬ ರಾಜಕಾರಣಕ್ಕೆ ಹೆಚ್ಚು ಮನ್ನಣೆ ಕೊಡಲಾಗುತ್ತಿದೆ.. ಇನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಯದುವೀರ್‌ ಅವರನ್ನು ಕಣಕ್ಕಿಳಿಸಲಾಗಿದೆ.. ಹೀಗಾಗಿ ಅವರ ಪ್ರಬಲ ಪೈಪೋಟಿ ನೀಡುವುದಕ್ಕಾಗಿ ಒಕ್ಕಲಿಗ ಸಮುದಾಯದ ಅಭ್ಯರ್ಥಿ ಆಯ್ಕೆಗಾಗಿ ಕಸರತ್ತು ನಡೆದಿದೆ.. ಮೂಲಗಳ ಪ್ರಕಾರ, ಮಾಜಿ ಸಿಎಂ ಸದಾನಂದಗೌಡರನ್ನು ಕರೆತಂದು ಅವರಿಗೆ ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್‌ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ..

ಇದನ್ನೂ ಓದಿ; ಶಿವಮೊಗ್ಗಕ್ಕೆ ಪ್ರಧಾನಿ ಮೋದಿ; ಏರ್‌ಪೋರ್ಟ್‌ನಲ್ಲೇ ಈಶ್ವರಪ್ಪನ ಕೋಪ ಶಮನ?

 

 

Share Post