Politics

ರಾಜ್‌ಕುಮಾರ್‌ ಅವರಿಗೂ ರಾಜಕೀಯ ಬೇಕಿತ್ತು; ಶಿವರಾಜ್‌ಕುಮಾರ್‌

ಬೆಂಗಳೂರು; ರಾಜ್‌ಕುಮಾರ್‌ ಅವರಿಗೂ ರಾಜಕೀಯ ಬೇಕಿತ್ತು.. ರಾಜಕೀಯ ಬೇಡ ಎಂದಿದ್ದರೆ ನಮಗ್ಯಾಕೆ ಬಂಗಾರಪ್ಪನವರ ಮಗಳ ಜೊತೆ ಮದುವೆ ಮಾಡುತ್ತಿದ್ದರು ಎಂದು ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಗೀತಾ ಹಿಂದೆ ಇರುತ್ತೇನೆ. ನಮ್ಮ ತಂದೆ ರಾಜಕೀಯ ವಿರೋದ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ; ಮತದಾರನ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ.?; ಮತದಾನಕ್ಕೆ ಯಾರು ಅರ್ಹರು..?

ಶಿವರಾಜ್‌ಕುಮಾರ್‌ ಅವರು ಇಂದು ತಮ್ಮ ಬೆಂಗಳೂರಿನ ನಿವಾಸದಲ್ಲಿ ಚಿತ್ರರಂಗದ ಗಣ್ಯರ ಜೊತೆ ಚರ್ಚೆ ನಡೆಸಿದರು.. ಗೀತಾ ಶಿವರಾಜ್‌ಕುಮಾರ್‌ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಬೆಂಬಲಿಸಲು ಚಿತ್ರರಂಗದ ಹಲವು ಗಣ್ಯರು ಆಗಮಿಸಿದ್ದರು.. ಅವರೊಂದಿಗೆ ಶಿವರಾಜ್‌ ಕುಮಾರ್‌ ಚರ್ಚೆ ಮಾಡಿದರು.. ಗೀತಾಗೆ ಬೆಂಬಲ ನೀಡಲು ಬಂದಿರುವ ಚಿತ್ರರಂಗದ ಗಣ್ಯರಿಗೆ ಧನ್ಯವಾದ ಎಂದು ಶಿವರಾಜ್‌ಕುಮಾರ್‌ ಹೇಳಿದ್ದಾರೆ.

ಇದನ್ನೂ ಓದಿ;ಮಂಡ್ಯನಾ, ಚಿಕ್ಕಬಳ್ಳಾಪುರನಾ..?; ನಡ್ಡಾ ಭೇಟಿ ನಂತರ ಸುಮಲತಾ ಅಚ್ಚರಿ ಮಾತು!

ರಾಜ್‌ಕುಮಾರ್‌ ಅವರಿಗೆ ಕೂಡಾ ರಾಜಕೀಯ ಬೇಕಿತ್ತು. ಹೀಗಾಗಿಯೇ ಎಲ್ಲಾ ಸಿಎಂಗಳೂ ಅವರನ್ನು ಭೇಟಿಯಾಗಲು ಬರುತ್ತಿದ್ದರು.. ಅವರು ರಾಜಕೀಯ ಮಾಡುವುದು ಯಾವತ್ತೂ ತಪ್ಪು ಎಂದು ಹೇಳಿರಲಿಲ್ಲ.. ಅವರು ರಾಜಕೀಯಕ್ಕೆ ಬರಲಿಲ್ಲ ಅಷ್ಟೇ.. ರಾಜಕೀಯ ತಪ್ಪು ಎಂಬ ಮನಸ್ಥಿತಿ ಅವರಿಗಿದ್ದಿದ್ದರೆ ರಾಜಕಾರಣಿಗಳ ಕುಟುಂಬ ಬಂಗಾರಪ್ಪನವರ ಮಗಳನ್ನು ನಮ್ಮ ಮನೆಗೆ ತರುತ್ತಿರಲಿಲ್ಲ ಎಂದು ಶಿವರಾಜ್‌ ಕುಮಾರ್‌ ಇದೇ ವೇಳೆ ಹೇಳಿದ್ದಾರೆ.

ಇದನ್ನೂ ಓದಿ; ನಟಿ ಅರುಂಧತಿ ನಾಯರ್‌ಗೆ ಅಪಘಾತ; ತಲೆಗೆ ಪೆಟ್ಟು ಬಿದ್ದು ಪರಿಸ್ಥಿತಿ ಚಿಂತಾಜನಕ

ನಾನು ಗೀತಾಗೆ ಹೇಳೋದು ಒಂದೇ ಮಾತು, ಇಲ್ಲಿ ಅನುಭವ ಮುಖ್ಯವಲ್ಲ. ಹೊಸ ರೂಪ ಕೊಡೋದು ಮುಖ್ಯ. ಅನುಭವಕ್ಕಿಂತಲೂ ಹೃದಯ ದೊಡ್ಡದು. ನಾನು ಗೀತಾ ಜೊತೆ ಇರುತ್ತೇನೆ. ನಾನು ಬೇರೆ, ಗೀತಾ ಬೇರೆ. ಗೀತಾ ಮೇಲೆ ದೊಡ್ಡ ಜವಾಬ್ದಾರಿ ಇದೆ. ರಾಜಕೀಯದಲ್ಲಿ ಹೆಣ್ಣುಮಕ್ಕಳು ತುಂಬಾನೇ ಕಡಿಮೆ ಇದ್ದಾರೆ. ಯಾವಾಗಲೂ ಮದರ್​ ಲ್ಯಾಂಡ್​ ಎನ್ನುತಾರೆ ಹೊರತು ಫಾದರ್​ ಲ್ಯಾಂಡ್​​ ಅಲ್ಲ ಎಂದರು.

ಇದನ್ನೂ ಓದಿ; ಮಾಜಿ ಸಿಎಂಗೆ ಕಾಂಗ್ರೆಸ್‌ ನಾಯಕರ ಗಾಳ; ನಾಳೆ ʻಉತ್ತರʼ ಎಂದ ಸದಾನಂದಗೌಡ!

Share Post